ಕುಶಾಲನಗರ, ಜು 25:ಕೊಡಗಿನ ರೈತ ಸಂಘಟನೆಗಳು ಬಿಡದಿ ಟೌನ್ ಶಿಪ್ ವಿರೋಧಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವಾಗ, ಗಡಿ ಪ್ರದೇಶಗಳಲ್ಲಿ ತಡೆದು ಕೂಡಿಗೆ ಸಹಕಾರ ಭವನದಲ್ಲಿ ದಿಗ್ಬಂಧನ ಹಾಕಿರುವುದು, ಕೊಡಗು ಜಿಲ್ಲೆಯ ಪ್ರತಿಯೊಬ್ಬ ರೈತರಿಗೆ ಮಾಡಿದಂತ ಅವಮಾನ ಹಾಗೂಪೊಲೀಸ್ ರ ನಡೆ ನಾಚಿಕೆ ಗೇಡಿನ ಸಂಗತಿ , ಇದರ ಹಿಂದೆ ಯಾವ ಕೈಗಳಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಸಂಚಾಲಕ ಡಾ. ಅರುಣ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ವ್ಯಾಪ್ತಿಗೆ ಒಳಪಡುವ ಬಿಡದಿ ಟೌನ್ ಶಿಪ್ ವಿರೋಧಿಸಿ ಕರ್ನಾಟಕದ ನಾನಾ ಜಿಲ್ಲೆಗಳಿಂದ ತಾಲೂಕುಗಳಿಂದ ರೈತ ಸಂಘಟನೆಗಳು ರೈತರ ಉಳಿವಿಗಾಗಿ ಬೈರಮಂಗಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತೇವೆ, ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಡುವ ಮತ್ತು ಪ್ರತಿಭಟಿಸುವ ಹಕ್ಕು ಪ್ರತಿಯೊಬ್ಬರಿಗೂ ಸಹ ಇದೆ . ರೈತರ ಅಳಿವು ಮತ್ತು ಉಳಿವಿನ ಪ್ರಶ್ನೆ, ಇಂತಹ ಹೋರಾಟಕ್ಕೆ ಕೊಡಗು ಜಿಲ್ಲೆ ಆದಂತಹ ರೈತ ಸಂಘಟನೆಗಳ ಮುಖಂಡರುಗಳು ತಮ್ಮ ತಮ್ಮ ಖರ್ಚಿನಿಂದ ವಾಹನವನ್ನು ಮಾಡಿಕೊಂಡು ಬಿಡದಿಯ ಕಡೆ ಹೊರಡುವ ಸಂದರ್ಭದಲ್ಲಿ ಪೊಲೀಸರು ತಡೆದು ರೈತ ಮುಖಂಡರುಗಳನ್ನು ಕೂಡಿ ಹಾಕಿರುವಂಥದ್ದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೊಡ್ಡ ದುರಂತ, ಹೋರಾಟ ಮಾಡುವಂತದ್ದು, ರೈತ ಸಂಘಟನೆಗಳ ನಿಲುವು ಆದರೆ ಅನುಷ್ಠಾನಗಳನ್ನ ಜಾರಿಗೆ ತರುವಂತದ್ದು ಬಿಡುವಂತದ್ದು ಸರ್ಕಾರಕ್ಕೆ ಬಿಟ್ಟಂತದ್ದು ಇಂತಹ ಸಂದರ್ಭದಲ್ಲಿ ಈ ರೀತಿ ಮಾಡಿರುವಂತದ್ದು ಕೊಡಗು ಜಿಲ್ಲೆಯ ಪ್ರತಿಯೊಬ್ಬ ರೈತನಿಗೆ ಮಾಡಿದಂತ ಅವಮಾನ,
ಇದರ ಬಗ್ಗೆ ಕೊಡಗಿನ SP ಕಾರಣ ಕೊಡಲೇಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರೈತ ಸಂಘಟನೆಗಳ ಒಕ್ಕೂಟದಿಂದ ಕೊಡಗು ಬಂದ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
Back to top button
error: Content is protected !!