ಕೂಡಿಗೆ, ಜು.22: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಕಾಡಾನೆ ಹಾವಳಿಯಿಂದಾಗಿ ಆ ಭಾಗದ ಉತ್ತಯ್ಯ ಎಂಬ ರೈತರ ಜಮೀನಿಗೆ ದಾಳಿ ಮಾಡಿ ಅಪಾರ ಪ್ರಮಾಣದ ಬೆಳೆಯನ್ನು ತುಳಿದು ತಿಂದು ನಷ್ಟ ಪಡಿಸಿವೆ.
ಬಾಣವಾರ ಮೀಸಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಜೇನುಕಲ್ಲು ಬೆಟ್ಟದ ಅಂಚಿನಲ್ಲಿ ಬಂದಿರುವ ಕಾಡಾನೆಗಳು ಉತ್ತಯ್ಯನವರ ಜಮೀನಿನಲ್ಲಿ ಬೆಳೆಸಲಾಗಿದ್ದ ಶುಂಠಿ, ಕೆನೆ, ಸಿಹಿ ಗೆಣಸು ಬೆಳೆಯನ್ನು ಮನಬಂದಂತೆ ನಷ್ಟ ಪಡಿಸಿವೆ. ಸ್ಧಳಕ್ಕೆ ಕೂಡಿಗೆ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಅನಂತ, ಹೆಬ್ಬಾಲೆ ವಲಯ ಉಪ ಅರಣ್ಯಾಧಿಕಾರಿ,ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ.
Back to top button
error: Content is protected !!