ಕಾರ್ಯಕ್ರಮ

ಕೂಡಿಗೆ ಡೇರಿಯಲ್ಲಿ ದಿ.ಚನ್ನಮ್ಮ ರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಕೂಡಿಗೆ, ಜು. 21: ಹಾಸನ ಹಾಲು ಉತ್ಪಾದಕರ ಒಕ್ಕೂಟದ ಘಟಕ ಕೂಡಿಗೆ ಡೈರಿಯಲ್ಲಿ ಒಕ್ಕೂಟದ ಕೊಡಗು ಜಿಲ್ಲೆಯ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ನೇತ್ರತ್ವದಲ್ಲಿ ಡೈರಿ ಅಧಿಕಾರಿ ವರ್ಗದವರು, ಸಿಬ್ಬಂದಿ ವರ್ಗ ಸೇರಿದಂತೆ ನೂರಾರು ಕಾರ್ಮಿಕರ ಸಮ್ಮುಖದಲ್ಲಿ ದೇಶದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ದಿವಂಗತ ಚನ್ನಮ್ಮ ರವರ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮವು ಡೈರಿಯ ಸಭಾಂಗಣದಲ್ಲಿ ನೆರವೇರಿತು.
ಮೊದಲ ಜಿಲ್ಲಾ ನಿರ್ದೇಶಕ ಕೂಡುಮಂಗಳೂರು ಸಹಕಾರ ಸಂಘದ ಅಧ್ಯಕ್ಷ ಕೆ ಕೆ ಹೇಮಂತ್ ಕುಮಾರ್ ಅವರು ದಿ. ಚನ್ನಮ್ಮರವರ ಭಾವ ಚಿತ್ರಕ್ಕೆ ಪುಷ್ಪಾಂಚನೆ ಮಾಡುವ ಮೂಲಕ ನೆರವೇರಿಸಿ ಅವರ ನಡೆದು ಬಂದ ದಾರಿಯ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕೂಡಿಗೆ ಡೈರಿ ವ್ಯವಸ್ಥಾಪಕ ನಂದೀಶ್, ಮಾರುಕಟ್ಟೆ ವ್ಯವಸ್ಥಾಪಕ ಮಲ್ಲೇಶ್ ಸೇರಿದಂತೆ ವಿವಿಧ ವಿಭಾಗ ಅಧಿಕಾರಿ ವರ್ಗದವರು, ಸಿಬ್ಬಂದಿಗಳು ನೂರಾರು ಕಾರ್ಮಿಕರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!