ಕುಶಾಲನಗರ, ಜು 16: ಝೇಂಕಾರ್ ಮ್ಯೂಸಿಕಲ್ ಇವೆಂಟ್ಸ್ ವತಿಯಿಂದ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಗಾನಕೋಗಿಲೆ ಎಸ್.ಜಾನಕಿಗೆ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮ್ಯೂಸಿಕಲ್ ಇವೆಂಟ್ಸ್ ನ ಆರ್. ರವಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ
ಇದೇ 21 ರಂದು ಕುಶಾಲನಗರದ ಕಲಾಭವನದಲ್ಲಿ ಜಾನಕಿ ಅಮ್ಮ ಅವರ ಹೆಸರಿನಲ್ಲಿ ‘ಜಾನಕಿ ಗಾನ ಸಂಗೀತಾ ಯಾನ’ ಎಂಬ ಒಂದು ವಿಶೇಷ ಕಾರ್ಯಕ್ರಮದ ಮೂಲಕ ಗಾಯನ ನಮನ ಕಾರ್ಯಕ್ರಮವನ್ನು ಏರ್ಪಡಿಸಿದ್ದೇವೆ. ಈ ಕಾರ್ಯಕ್ರಮಕ್ಕೆ ಜಾನಕಿ ಅಮ್ಮನ ಅಭಿಮಾನಿಗಳು ಹಾಗೂ ಅವರ ಹಿತೈಷಿಗಳು, ಅವರನ್ನು ಇಷ್ಟಪಡತಕ್ಕಂತಹ ಒಂದಷ್ಟು ಜನವರ್ಗದವರು ದಯವಿಟ್ಟು ಬಂದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ರವಿ ಮನವಿ ಮಾಡಿದರು.
ಈ ಸಂದರ್ಭ ತಂಡದ ದಿನೇಶ್, ಹರೀಶ್,ನಿತಿನ್ ಇದ್ದರು.
Back to top button
error: Content is protected !!