ಅರಣ್ಯ ವನ್ಯಜೀವಿ

ಹಾರಂಗಿ, ಚಿಕ್ಲಿಹೊಳೆ ಅಣೆಕಟ್ಟೆಯಲ್ಲಿ ಕಾಡಾನೆ ಉಪಟಳ

ಕುಶಾಲನಗರ, ಜು 13: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಉತ್ತರ ದ್ವಾರದ ಗೇಟ್ ಅನ್ನು ಕಾಡಾನೆ ತುಳಿದು ಹಾನಿ ಮಾಡಿದ ಘಟನೆ ನಡೆದಿದೆ.
ಅಣೆಕಟ್ಟೆಯ ಮೇಲ್ಬಾಗದ ಉತ್ತರ ಭಾಗವು ಮೀಸಲು ಅರಣ್ಯ ಪ್ರದೇಶದ ಸಮೀಪವಿದ್ದು ಅಲ್ಲಿಂದ ಲಗ್ಗೆಯಿಟ್ಟ ಕಾಡಾನೆ ಆ ಭಾಗದಲ್ಲಿ ಆಳವಡಿಸಿದ್ದ ಮುಖ್ಯ ಗೇಟನ್ನು ಹಾನಿ ಮಾಡಿ ಅಣೆಕಟ್ಟೆಯ ಭಾಗಕ್ಕೆ ಪ್ರವೇಶಿಸಿರುವುದು ಸಿಸಿ ಟಿವಿಯಲ್ಲಿ ಕಂಡುಬಂದಿದೆ.
ಮತ್ತೊಂದು ಪ್ರಕರಣದಲ್ಲಿ
ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಒಂದಾದ ಚಿಕ್ಲಿಹೊಳೆ ಅಣೆಕಟ್ಟೆ ವ್ಯಾಪ್ತಿಯಲ್ಲಿ ಕುಶಾಲನಗರ ರೋಟರಿ ಕ್ಲಬ್ ವತಿಯಿಂದ ಅಳವಡಿಸಿದ್ದ ಕಸ ಸಂಗ್ರಹ ಘಟಕವನ್ನು ಕಾಡಾನೆ ನೆಲಸಮಗೊಳಿಸಿದೆ.
ಚಿಕ್ಲಿಹೊಳೆಗೆ ಆಗ್ರಮಿಸುವ ಪ್ರವಾಸಿಗರು ಕಸವನ್ನು ಒಂದೆಡೆ ಹಾಕುವ ಸಹಕಾರಿಯಾಗುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಯಿಂದ ಬಾಟಲಿ ಆಕಾರದ ಕಬ್ಬಿಣ ಘಟಕವನ್ನು ಸ್ಥಾಪಿಸಲಾಗಿತ್ತು. ಇದನ್ನು ಕಾಡಾನೆ
ನೆಲಸಮಗೊಳಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!