ಅಪಘಾತ

ರಸ್ತೆ ಅಪಘಾತದಲ್ಲಿ ಗಾಯಗೊಂಡ ಜಿಂಕೆ

ಕುಶಾಲನಗರ, ಜು 10: ಕುಶಾಲನಗರ ಕಾವೇರಿ ನಿಸರ್ಗಧಾಮ-ಗುಡ್ಡೆಹೊಸೂರು ನಡುವೆ ನಡೆದ ಅಪಘಾತದಲ್ಲಿ ಜಿಂಕೆಯೊಂದು ಗಂಭೀರವಾಗಿ ಗಾಯಗೊಂಡಿದೆ.

ರಾಷ್ಟ್ರೀಯ ಹೆದ್ದಾರಿ ನಡುವೆ ಅಡ್ಡಬಂದ ಜಿಂಕೆಗೆ ಒಮಿನಿ ವಾಹನ ಡಿಕ್ಕಿಯಾಗಿದೆ. ಘಟನೆಯಲ್ಲಿ ಜಿಂಕೆ ತಲೆಗೆ ಗಂಭೀರವಾಗಿ ಗಾಯವಾಗಿದೆ. ಗಾಯಗೊಂಡ ಜಿಂಕೆಯನ್ನು ಸ್ಥಳೀಯರು ಆರೈಕೆ ಮಾಡಿದ್ದು ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಜಿಂಕೆಯನ್ನು ಕೊಂಡೊಯ್ದು ಆನೆಕಾಡು ಕೇಂದ್ರದಲ್ಲಿ ಚಿಕಿತ್ಸೆಗೆ ಒಳಪಡಿಸಿದ್ದಾರೆ. ಪಶುವೈದ್ಯ ಡಾ. ಸಂಜೀವ ಕುಮಾರ್ ಆರ್.ಶಿಂಧೆ ಮತ್ತು ಡಾ.ಸಿದ್ದಲಿಂಗಯ್ಯ ಅವರು ಜಿಂಕೆಗೆ ಚಿಕಿತ್ಸೆ ನೀಡುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!