ಕುಶಾಲನಗರ, ಜು 07: ಜೆಸಿಐ ಕುಶಾಲನಗರ ಕಾವೇರಿ ವತಿಯಿಂದ ಸ್ಥಳೀಯ ಖಾಸಗಿ ಹೋಟೆಲ್ನಲ್ಲಿ ಲೋಕಲ್ ಗವರ್ನಿಂಗ್ ಬೋರ್ಡ್ (LGB) ಹಾಗೂ ಜನರಲ್ ಬಾಡಿ (GB) ಸಭೆಯನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ, ರೋಟರಿ ಸಂಸ್ಥೆಯ ಕುಶಾಲನಗರ ಕಾವೇರಿಯ 2026-27ನೇ ಸಾಲಿನ ಅಸಿಸ್ಟೆಂಟ್ ಗವರ್ನರ್ ಆಗಿ ಆಯ್ಕೆಯಾಗಿರುವ JC ರಂಗಸ್ವಾಮಿ, ಜೆಸಿಐ ಕುಶಾಲನಗರ ಕಾವೇರಿಯ ರೋಟರಿ ಪ್ರಸ್ತುತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ JC CA ರುದ್ರೇಶ್ ಪಟೇಲ್, ಹಾಗೂ ಹಲವು ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ JC ಟಿ.ಜಿ. ಪ್ರೇಮ್ಕುಮಾರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಜೆಸಿಐ ವಲಯ-14ರ ಮಧ್ಯವಾರ್ಷಿಕ ಸಮ್ಮೇಳನದಲ್ಲಿ (Midcon Event) ಜೆಸಿಐ ಕುಶಾಲನಗರ ಕಾವೇರಿಗೆ ಲಭಿಸಿದ “ಔಟ್ಸ್ಟ್ಯಾಂಡಿಂಗ್ ಅಧ್ಯಕ್ಷ” ಪ್ರಶಸ್ತಿಯನ್ನು ಅಧ್ಯಕ್ಷ JC ಶ್ರೀನಿವಾಸ್ ಬಿ. ಅವರಿಗೆ ಹಾಗೂ “ಔಟ್ಸ್ಟ್ಯಾಂಡಿಂಗ್ ಟ್ರೈನಿಂಗ್ LOM” ಪ್ರಶಸ್ತಿಯನ್ನು ಸದಸ್ಯರ ಸಮ್ಮುಖದಲ್ಲಿ ಪ್ರದರ್ಶಿಸಿ ಅಭಿನಂದಿಸಲಾಯಿತು. ಈ ಸಾಧನೆಯು ಜೆಸಿಐ ಕುಶಾಲನಗರ ಕಾವೇರಿಯ ಸಂಘಟನಾ ಶಕ್ತಿ, ನಾಯಕತ್ವ ಹಾಗೂ ತರಬೇತಿ ಕ್ಷೇತ್ರದಲ್ಲಿನ ನಿರಂತರ ಕಾರ್ಯಚಟುವಟಿಕೆಗಳಿಗೆ ಸಂದ ಗೌರವವಾಗಿದೆ ಎಂದು ಸದಸ್ಯರು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕುಶಾಲನಗರದ ಮಾಜಿ ಅಧ್ಯಕ್ಷರಾದ JC ಲೋಕೇಶ್ ಸಾಗರ್, JC ರಜನಿಕಾಂತ್ ಎಂ.ಜೆ., JC ಪ್ರಶಾಂತ್ ಕೆ.ಡಿ., JC ಜಗದೀಶ್ ಬಿ., JC ತೇಜ ದಿನೇಶ್, ಹಾಗೂ ಜೆಸಿಐ ಶನಿವಾರಸಂತೆ ಸಿರಿ ಅಧ್ಯಕ್ಷ JC ರವಿ ಸಿ. ಉಪಸ್ಥಿತರಿದ್ದು, ಸಂಘಟನೆಯ ಅಭಿವೃದ್ಧಿ, ನಾಯಕತ್ವದ ಮಹತ್ವ ಹಾಗೂ ಮುಂದಿನ ಯೋಜನೆಗಳ ಕುರಿತು ತಮ್ಮ ಅಮೂಲ್ಯ ಅಭಿಪ್ರಾಯಗಳನ್ನು ಹಂಚಿಕೊಂಡರು.
ಸಭೆಯಲ್ಲಿ ಸದಸ್ಯರು ಕುಟುಂಬ ಸಮೇತರಾಗಿ ಭಾಗವಹಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು ನಂತರ ನಡೆದ ಭೋಜನ ಕಾರ್ಯಕ್ರಮದಲ್ಲಿ ಎಲ್ಲರೂ ಪರಸ್ಪರ ಸ್ನೇಹ, ಸೌಹಾರ್ದತೆ ಮತ್ತು ಆತ್ಮೀಯತೆಯನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಕುಶಾಲನಗರ ಕಾವೇರಿ ಅಧ್ಯಕ್ಷ ಶ್ರೀನಿವಾಸ್ ಬಿ. ವಹಿಸಿದ್ದರು. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲಾ ಸದಸ್ಯರು, ಮಾಜಿ ಅಧ್ಯಕ್ಷರು, ಗಣ್ಯರು ಹಾಗೂ ಕುಟುಂಬ ಸದಸ್ಯರಿಗೆ ಅವರು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.
Back to top button
error: Content is protected !!