ಕುಶಾಲನಗರ, ಜೂ 30: ಬಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ ಜ್ಯೇಷ್ಠ ಪೂರ್ಣಿಮೆ ಅಂಗವಾಗಿ ಕೊಡಗು-ಮೈಸೂರು ಗಡಿ ಸೇತುವೆ ಬಳಿಯ ಕಾವೇರಿ ಕ್ಷೇತ್ರದಲ್ಲಿ 160ನೇ ಹುಣ್ಣಿಮೆ ಪೂಜಾ ಕೈಂಕರ್ಯ ಜರುಗಿತು.
ಅರ್ಚಕ ಪುರುಷೋತ್ತಮ ಭಟ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಕಾವೇರಿ ಮಾತೆಗೆ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಿ
ಮಹಾಮಂಗಳಾರತಿ ಬಳಿಕ ನೆರೆದಿದ್ದ ಭಕ್ತರಿಗೆ ಪ್ರಸಾದ, ಅನ್ನಸಂತರ್ಪಣೆ ನೆರವೇರಿಸಲಾಯಿತು. ಉತ್ತಮ ಮಳೆ ಬೆಳೆ, ನಾಡಿನ ಸಮೃದ್ದಿಗಾಗಿ ಪ್ರಾರ್ಥಿಸಲಾಯಿತು.
ಬೆಂಗಳೂರಿನ ಸುನಂದ ಕೌಶಿಕ್ ದಿನದ ಪೂಜಾ ಸೇವಾರ್ಥ ನೆರವೇರಿಸಿದರು.
ಈ ಸಂದರ್ಭ ಬಾರವಿ ಸಂಘದ ರವೀಂದ್ರ ಪ್ರಸಾದ್ ಮಾತನಾಡಿದರು.
ಸತೀಶ್ ತಂಡದಿಂದ ವಾದ್ಯಗೋಷ್ಠಿ ನಡೆಯಿತು.
ಪೂಜಾ ಕಾರ್ಯಕ್ರಮದಲ್ಲಿ ಎಸ್.ಎಲ್.ಎನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೇಲಾಯುಧಮ್, ಪ್ರಮುಖರಾದ ಕನ್ನಕಿ, ಬಾರವಿ ಕಾವೇರಿ ಕನ್ನಡ ಸಂಘದ ಬಬೀಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್, ಇ.ಟಿ.ಚಂದ್ರು, ರಾಜರಾಜೇಶ್ವರಿ ಚಂದ್ರು, ತಿಲಕ್ ಪೂಜಾರಿ, ಕಾವೇರಿಮಣಿ, ರುದ್ರೇಶ್, ವಿನಯ್ ಮುತ್ತಿನ ಮುಳ್ಳುಸೋಗೆ, ಮಹಾತ್ಮಾ, ಶಂಕರ್ ಕೊಪ್ಪ ಮತ್ತಿತರರು ಇದ್ದರು.
Back to top button
error: Content is protected !!