ಕಾರ್ಯಕ್ರಮ

ಕುಶಾಲನಗರದಲ್ಲಿ ಕರವೇ ವತಿಯಿಂದ ಟಿ.ಎ.ನಾರಾಯಣಗೌಡರ 60ನೇ ಹುಟ್ಟುಹಬ್ಬ ಆಚರಣೆ: ದೇವಾಲಯದಲ್ಲಿ ಪೂಜೆ

ಕುಶಾಲನಗರದಲ್ಲಿ ಕರವೇ ವತಿಯಿಂದ ಟಿ.ಎ.ನಾರಾಯಣಗೌಡರ 60ನೇ ಹುಟ್ಟುಹಬ್ಬ ಆಚರಣೆ: ದೇವಾಲಯದಲ್ಲಿ ಪೂಜೆ

ಕುಶಾಲನಗರ, ಜೂ 10: ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ.ನಾತಾಯಣಗೌಡರ ಹುಟ್ಟುಹಬ್ಬವನ್ನು ಕುಶಾಲನಗರದಲ್ಲಿ ಆಚರಿಸಲಾಯಿತು.
ಕರವೇ ರಾಜ್ಯ ಸಂಚಾಲಕಿ ದೀಪಾ ಪೂಜಾ ನೇತೃತ್ವದಲ್ಲಿ ಕರವೇ ಪದಾಧಿಕಾರಿಗಳು, ಕಾರ್ಯಕರ್ತರು ಕುಶಾಲನಗರದ ಶ್ರೀ ಗಣಪತಿ ದೇವಾಲಯದಲ್ಲಿ ವಿಶೇಷ ಅರ್ಚನೆ ಸಲ್ಲಿಸಿ ಪೂಜೆ ನೆರವೇರಿಸಿದರು. ಬಳಿಕ ಸಾರ್ವಜನಿಕರಿಗೆ ಸಿಹಿ ವಿತರಣೆ‌ ಮಾಡಲಾಯಿತು.
ಟಿ.ಎ.ನಾರಾಯಣಗೌಡರ ಹುಟ್ಟುಹಬ್ಬ ಅಂಗವಾಗಿ ರಾಜ್ಯಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಕುಶಾಲನಗರದಲ್ಲಿ ಕೂಡ ತಾಲೂಕು ಘಟಕದಿಂದ ಪೂಜೆ‌ ನೆರವೇರಿಸಲಾಗಿದೆ. ಜಿಲ್ಲೆಯ ಆಯಾ ತಾಲೂಕಿನಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕರವೇ ತಾಲೂಕು ಅಧ್ಯಕ್ಷ ಬಿ.ಜೆ.ಅಣ್ಣಯ್ಯ ಮಾತನಾಡಿ, ನಾರಾಯಣಗೌಡರ ಹುಟ್ಟುಹಬ್ಬ ಅಂಗವಾಗಿ ಕುಶಾಲನಗರದಲ್ಲಿ ಪೂಜೆ ಸಲ್ಲಿಸಿದ ಬಳಿಕ ಭಾಗಮಂಡಲದಲ್ಲಿ ಕಾವೇರಿ ಮಾತೆಗೆ ಪೂಜೆ ನೆರವೇರಿಸಲಾಗಿದೆ ಎಂದು ತಿಳಿಸಿದರು.
ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ರೂಪಾ ಹಾನಗಲ್ ಮಾತನಾಡಿ, ಟಿ.ಎ. ನಾರಾಯಣಗೌಡರಿಗೆ ಶುಭ ಕೋರಿದರು.
ಈ ಸಂದರ್ಭ ಕರವೇ ಜಿಲ್ಲಾಧ್ಯಕ್ಷರುಗಳಾದ ಕೆ.ಪಿ.ರಾಜು, ಜ್ಯೋತಿ ಕುದುಪಜೆ, ಜಿಲ್ಲಾ ಸಂಚಾಲಕ ಗೋವಿಂದ ರಾಜ್ ದಾಸ್, ತಾಲೂಕು ಗೌರವಾಧ್ಯಕ್ಷ ಧನರಾಜ್, ತಾಲೂಕು ಉಪಾಧ್ಯಕ್ಷರಾದ ಫಯಾಜ್,‌ ನಾಸಿರ್ ಪ್ರಧಾನ ಕಾರ್ಯದರ್ಶಿ ಕುಮಾರ್ ದೇವಾಂಗ, ಸಹ ಕಾರ್ಯದರ್ಶಿ ರಾಕೇಶ್, ಹೋಬಳಿ ಅಧ್ಯಕ್ಷರುಗಳಾದ ರಾಜೇಶ್ ಕೂಡಿಗೆ, ಗೀತಾ ರಾಜೇಶ್, ಜಿಲ್ಲಾ ಕಾರ್ಯದರ್ಶಿ ಭಾಗ್ಯ, ನಗರಾಧ್ಯಕ್ಷೆ ಅನಿತಾ, ಸದಸ್ಯರಾದ ಅವರ್ತಿ ಮಹದೇವ್, ಮಂಜಯ್ಯ, ಕೃಷ್ಣ,ಕಲ್ಪನಾ ದಿನೇಶ್, ಅಶ್ವಿನಿ, ಲಲಿತಾ, ಮಡಿಕೇರಿ ತಾಲೂಕು ಅಧ್ಯಕ್ಷ ಪ್ರವೀಣ್, ಕಾರ್ಮಿಕ ಘಟಕದ ಅಧ್ಯಕ್ಷೆ ದೀಪ್ತಿ, ಉಪಾಧ್ಯಕ್ಷೆ ಕುಮಾರಿ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!