ಕುಶಾಲನಗರ, ಮೇ 25: ಯುದ್ದ ಕಾರಣದಿಂದ ತೈಲ ಅಭಾವ ಸೃಷ್ಠಿಯಾಗಿರುವ ಕಾರಣ ಪ್ರಧಾನಿ ಮೋದಿಯವರ ಕರೆಯಂತೆ ಇಂಧನ ಮತ್ತು ಗ್ಯಾಸ್ ಮಿತ ಬಳಕೆಗೆ ಮಾಜಿ ಶಾಸಕ ಅಪ್ಪಚ್ಚುರಂಜನ್ ಅವರು ಕರೆ ನೀಡಿದರು.
ಇಂಧನ ಉಳಿತಾಯ ದೃಷ್ಠಿಯಿಂದ ಅವರು ಪತ್ನಿ ಸಹಿತರಾಗಿ ಕಾರಿನ ಬದಲಾಗಿ ಸಾರಿಗೆ ಬಸ್ ನಲ್ಲಿ ಬೆಂಗಳೂರಿಗೆ ಪ್ರಯಾಣ ಕೈಗೊಂಡಿದ್ದಾರೆ. ಈ ಸಂದರ್ಭ ಕುಶಾಲನಗರ ಸಾರಿಗೆ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಸಾರ್ವಜನಿಕರು ಇಂತಹ ಪರಿಸ್ಥಿತಿಯಲ್ಲಿ ಧೃತಿಗೆಡದೆ ಇರುವ ಸಂಪನ್ಮೂಲಗಳನ್ನು ಅನಾವಶ್ಯಕ ಪೋಲು ಮಾಡದೆ ಸಮರ್ಪಕ ಬಳಕೆಗೆ ಚಿಂತನೆ ಹರಿಸಬೇಕಿದೆ. ಪ್ರತಿ ತಿಂಗಳು ನನಗೆ ವೈಯಕ್ತಿಕ ಒಂದು ಸಾವಿರ ಲೀಟರ್ ಪೆಟ್ರೋಲ್, ಡೀಸೆಲ್ ಅಗತ್ಯವಿದ್ದು, ಅದನ್ನು ತಾನು 500 ಲೀಟರ್ ಗೆ ಇಳಿಸಲು ನಿರ್ಧರಿಸಿದ್ದು ದೂರದ ಪ್ರದೇಶಗಳಿಗೆ ಬಸ್ ನಲ್ಲಿ ಸಂಚರಿಸಲು ತೀರ್ಮಾನಿಸಿರುವುದಾಗಿ ತಿಳಿಸಿದರು.
ಈ ಸಂದರ್ಭ ಬಿಜೆಪಿ ಮುಖಂಡರು ಇದ್ದರು.
Back to top button
error: Content is protected !!