ಕ್ರೀಡೆ

ಸರಕಾರಿ ನೌಕರರ ಕ್ರಿಕೆಟ್ ಟೂರ್ನಿ‌ ಸಮಾರೋಪ: ಅಶಕ್ತರಿಗೆ ನೌಕರರಿಂದ ಆರ್ಥಿಕ ನೆರವು

ಕುಶಾಲನಗರ, ಮೇ 19: ಕುಶಾಲನಗರ ಪಿ.ಎಂ.ಶ್ರೀ ಶಾಲಾ ಮೈದಾನದಲ್ಲಿ‌ ನಡೆದ ಸೋಮವಾರಪೇಟೆ ತಾಲೂಕು ಮತ್ತು ಕುಶಾಲನಗರ ತಾಲೂಕು ಸರ್ಕಾರಿ ನೌಕರರ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭ ನಡೆಯಿತು.
ಅರಣ್ಯ ಇಲಾಖೆ ತಂಡ ಪ್ರಥಮ, ಪೊಲೀಸ್ ಇಲಾಖೆ ತಂಡ ದ್ವಿತೀಯ ಸ್ಥಾನ ಪಡೆಯಿತು.
ಕಂದಾಯ ಇಲಾಖೆ ತೃತೀಯ, ನ್ಯಾಯಾಂಗ ಇಲಾಖೆ ತಂಡ ನಾಲ್ಕನೇ ಸ್ಥಾನ ಗಳಿಸಿತು.
ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಬಹುಮಾನ ವಿತರಿಸಿದರು.

ಕ್ರೀಡೆ ಹೊರತುಪಡಿಸಿ ನೌಕರರ ಸಂಘ‌ ಮಾನವೀಯ ಸೇವಾ ಚಟುವಟಿಕೆ ಹಮ್ಮಿಕೊಂಡಿದ್ದು ವಿಶೇಷವಾಗಿತ್ತು. ಪೋಷಕರನ್ನು ಕಳೆದುಕೊಂಡಿರುವ ಇಬ್ಬರು ಮಕ್ಕಳಿಗೆ ಭವಿಷ್ಯ ನಿಧಿಗೆ ಒದಗಿಸಲಾದ 1 ಲಕ್ಷ  ಮೊತ್ತದ ಎಫ್.ಡಿ.ಬಾಂಡ್ ಅನ್ನು ಶಾಸಕರ ಮೂಲಕ ಹಸ್ತಾಂತರಿಸಲಾಯಿತು. ಜೊತೆಗೆ ಕುಶಾಲನಗರದ 10 ಕ್ಕೂ ಅಧಿಕ ಬೀದಿ‌ಬದಿ ವ್ಯಾಪಾರಿಗಳಿಗೆ ನೆರಳಿನ ಕೊಡೆ ಗಳನ್ನು ಸಮಾರೋಪ‌ ಸಮಾರಂಭದಲ್ಲಿ ವಿತರಣೆ ಮಾಡಲಾಯಿತು.

ಇದೇ ಸಂದರ್ಭ ಜಿಲ್ಲಾ ಗ್ಯಾರಂಟಿ ಅನುಷ್ಠಾನದ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ತಾಲೂಕು ಸಮಿತಿ ಅಧ್ಯಕ್ಷ ವಿ.ಪಿ ಶಶಿಧರ್, ಸೋಮವಾರಪೇಟೆ, ಕುಶಾಲನಗರ ತಹಸೀಲ್ದಾರ್ ಗಳಾದ ಕೃಷ್ಣಮೂರ್ತಿ, ಕಿರಣ್ ಗೌರಯ್ಯ, ಕ್ರೀಡಾಕೂಟ ಸಂಯೋಜಕರಾದ ಸೈಜನ್ ಕೆ ಪೀಟರ್, ಶಿವಮೂರ್ತಿ, ರತ್ನಕುಮಾರ್, ಸ್ವಾಮಿ, ಹರೀಶ ಸೇರಿದಂತೆ ಎಲ್ಲಾ ಇಲಾಖೆ ಅಧಿಕಾರಿ ವರ್ಗ, ಸಿಬ್ಬಂದಿಗಳು ನೌಕರರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!