ಕುಶಾಲನಗರ, ಮೇ 19: ಟಿಬೇಟಿಯನ್ನರ ಸರ್ವೋಚ್ಛ ಧರ್ಮಗುರು ದಲೈಲಾಮಾ ಅವರ ಉತ್ತರಾಧಿಕಾರಿಯಾಗಿ ಅಧಿಕೃತವಾಗಿ ಘೋಷಿಸಲ್ಪಟ್ಟಿದ್ದ 11ನೇ ಪಂಚೆನ್ ಲಾಮಾ ಅವರು ಕಣ್ಮೆರೆಯಾಗಿ 31ನೇ ವರ್ಷದ ಅಂಗವಾಗಿ ಅನುಯಾಯಿಗಳಿಂದ ಕ್ಯಾಂಪೇನ್ ನಡೆಯಿತು.
ಬೈಲುಕೊಪ್ಪೆಯ
ರೀಜನಲ್ ಟಿಬೇಟಿಯನ್ ಯೂತ್ ಕಾಂಗ್ರೆಸ್ ಹಾಗೂ ವಾಲೆಂಟರಿ ಟಿಬೆಟ್ ಅಡ್ವೋಕೆಸಿ ಗ್ರೂಪ್ ನ ಪದಾಧಿಕಾರಿಗಳು
ಗೋಲ್ಡನ್ ಟೆಂಪಲ್ ಬಳಿ ಸಾರ್ವಜನಿಕರಿಗೆ ಕರಪತ್ರ ಹಂಚುವ ಮೂಲಕ 11ನೇ ಪಂಚೆನ್ ಲಾಮಾ ಗೆಧುನ್ ಚೋಕಿ ನಿಮಾ ಅವರ ಬಗ್ಗೆ ಮಾಹಿತಿ ಒದಗಿಸಿದರು. ವಿವಿಧ ಘೋಷಣೆಗಳನ್ನು ಒಳಗೊಂಡ ಭಿತ್ತಚಿತ್ರ ಹಿಡಿದು ಪಂಚೆನ್ ಲಾಮಾ ಅವರ ಬಿಡುಗಡೆಗೆ ಒತ್ತಾಯಿಸಿದರು.
ವಾಲೆಂಟರಿ ಟಿಬೆಟ್ ಅಡ್ವೋಕೆಸಿ ಗ್ರೂಪ್ ನ
ಕಾರ್ಯಕಾರಿ ಸದಸ್ಯೆ
ಪೆಮ ಚೋಡೆನ್ ಲಕ್ ಮಾತನಾಡಿ,
ದಲೈಲಾಮಾ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾದ 11ನೇ ಪಂಚೆನ್ ಲಾಮಾ ಅವರಿಗೆ 6 ವರ್ಷವಿದ್ದ ಸಂದರ್ಭ ಚೀನಾ ದೇಶದವರು ಅಪಹರಿಸಿ 31 ವರ್ಷ ಕಳೆದಿದೆ. ಪಂಚೆನ್ ಲಾಮಾ ಎಲ್ಲಿದ್ದಾರೆ, ಹೇಗಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ. ಕೂಡಲೆ ಚೀನಾ ದೇಶ ಅವರನ್ನು ಬಿಡುಗಡೆ ಮಾಡಬೇಕು ಅಥವಾ ಅವರ ಪ್ರಸ್ತುತ ಸ್ಥಿತಿಯ ಬಗ್ಗೆ ಮಾಹಿತಿ ಒದಗಿಸಬೇಕು. ಆರು ವರ್ಷದ ಮಗುವಿನ ಬಲವಂತದ ನಾಪತ್ತೆ ಕೇವಲ ಮೂಲಭೂತ ಮಾನವ ಹಕ್ಕುಗಳ ಉಲ್ಲಂಘನೆ ಮಾತ್ರವಲ್ಲದೆ, ಅಂತರಾಷ್ಟ್ರೀಯ ಕಾನೂನಿನ ತತ್ವ ಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.
ರೀಜನಲ್ ಟಿಬೇಟಿಯನ್ ಯೂತ್ ಕಾಂಗ್ರೆಸ್ ನ ಕಾರ್ಯಕಾರಿ ಸದಸ್ಯ
ತೆನ್ಜಿನ್ ಧಕ್ಪಾ ಲಕ್ ಮಾತನಾಡಿ, ಪಂಚೆನ್ ಲಾಮಾ ಅವರು
ದೀರ್ಘಕಾಲದವರೆಗೆ ನಾಪತ್ತೆಯಾಗಿರುವ ಟಿಬೇಟ್ ನ ಮಗು ಮತ್ತು ವಿಶ್ವದ ಅತ್ಯಂತ ಕಿರಿಯ ರಾಜಕೀಯ ಖೈದಿಯಾಗಿದ್ದಾರೆ. 31 ವರ್ಷಗಳ ಹಿಂದೆ 1995 ರ ಮೇ 17 ರಂದು 6 ವರ್ಷದ ಮಗುವಾಗಿದ್ದ ಅವರನ್ನು ಮತ್ತು ಕುಟಂಬದವರನ್ನು ಚೀನಾ ಅಪಹರಿಸಿದ್ದು ಇದುವರೆಗೆ ಅವರ ಇರುವಿಕೆ ಬಗ್ಗೆ ಜಗತ್ತಿಗೆ ಮಾಹಿತಿ ಲಭ್ಯವಾಗಿಲ್ಲ. ಚೀನಾ ಸರಕಾರ ತಕ್ಷಣವೇ ಪಂಚೆನ್ ಲಾಮಾ ಮತ್ತು ಅವರ ಕುಟುಂಬದ ಪರಿಸ್ಥಿತಿ, ಇರುವಿಕೆ ಬಗ್ಗೆ ಬಹಿರಂಗಪಡಿಸಿಬೇಕು ಮತ್ತು ಯಾವುದೇ ವಿಳಂಭವಲ್ಲದೆ ಸ್ವಾತಂತ್ರ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಬೈಲುಕೊಪ್ಪೆಯ ರೀಜನಲ್ ಟಿಬೇಟಿಯನ್ ಯೂತ್ ಕಾಂಗ್ರೆಸ್ ನ ಅಧ್ಯಕ್ಷ ತುಪ್ಟೆನ್ ರಬ್ತೆನ್, ಉಪಾಧ್ಯಕ್ಷ ಕರ್ಮ ದೋರ್ಜಿ, ಕಾರ್ಯಕಾರಿ ಸದಸ್ಯ ತುಪ್ಟೆನ್ ತೆನ್ಪೆಲ್, ಇದ್ದರು.
Back to top button
error: Content is protected !!