ಕ್ರೀಡೆ

ಕುಶಾಲನಗರದಲ್ಲಿ 21ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಟೂರ್ನಿಗೆ ಚಾಲನೆ

ಕುಶಾಲನಗರ, ‌ಮೇ 10:ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಆಶ್ರಯದಲ್ಲಿ 21ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಟೂರ್ನಿಗೆ ಕುಶಾಲನಗರದ ಗುಂಡುರಾವ್ ಬಡಾವಣೆ ಮೈದಾನದಲ್ಲಿ ಚಾಲನೆ ನೀಡಲಾಯಿತು.

ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಅಧ್ಯಕ್ಷ ಅಬ್ದುಲ್ ರಶೀದ್ ಕೆ.ಎ. ಕ್ರೀಡಾ ಧ್ವಜಾರೋಹಣ ಮೂಲಕ ಕ್ರೀಡಾಕೂಟ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕ್ರೀಡಾಕೂಟ ನಡೆದು ಬಂದ‌ ಹಾದಿಯ ಬಗ್ಗೆ ವಿವರಿಸಿದರು. ಮುಸ್ಲಿಂ‌ ಕಪ್ ಕೇವಲ ಒಂದು ಧರ್ಮಕ್ಕೆ ಮೀಸಲಾಗಿಸಿಲ್ಲ. ಎಲ್ಲಾ ಸಮುದಾಯದ ಮುಖಂಡರು ಭಾಗಿಯಾಗಿ ಕ್ರೀಡಾಕೂಟಕ್ಕೆ ಶುಭ ಕೋರುವ ಸಂಸ್ಕೃತಿ ಮುಂದುವರೆಸಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ
ಕುಶಾಲನಗರ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್‌ ಮಾತನಾಡಿ, ಎರಡು ದಶಕಗಳ ಇತಿಹಾಸ ಹೊಂದಿರುವ ಮುಸ್ಲಿಂ‌ ಕಪ್ ಜಿಲ್ಲೆಯಲ್ಲಿ ಅತ್ಯಂತ ಅದ್ದೂರಿ ಕ್ರೀಡಾಕೂಟಗಳಿಗೆ ಹೆಸರುವಾಸಿ. ಸೌಹಾರ್ದ ಭಾರತ ನಿರ್ಮಾಣ,‌ ಪರಸ್ಪರ ಭ್ರಾತೃತ್ವದ ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ಕ್ರೀಡಾಕೂಟದ ಆಶಯಗಳು ಈಡೇರಲಿ ಎಂದು ಶುಭ ಕೋರಿದರು.
ಮತ್ತೋರ್ವ ಅತಿಥಿ ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡುರಾವ್‌ ಮಾತನಾಡಿ, ಗುಂಡುರಾವ್ ಬಡಾವಣೆ ‌ಮೈದಾನವನ್ನು ಒಳಾಂಗಣ ಹಾಗೂ ಹೊರಾಂಗಣ ಸ್ಟೇಡಿಯಂ‌ ಮತ್ತು ತರಬೇತಿ ಕೇಂದ್ರವಾಗಿಸುವ ನಿಟ್ಟಿನಲ್ಲಿ ಶಾಸಕ ಡಾ.ಮಂತರ್ ಗೌಡ ಅವರು ದೂರದೃಷ್ಟಿ ಹೊಂದಿದ್ದು ಸಚಿವ ದಿನೇಶ್ ಗುಂಡುರಾವ್ ಅವರ ಮೂಲಕ ಕೇಂದ್ರದ ಸಹಕಾರ ಪಡೆಯುವ ಚಿಂತನೆ ನಡೆಸಿದ್ದಾರೆ ಎಂದು ತಿಳಿಸಿದರು.
ಕುಶಾಲನಗರ
ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ
ಅಬ್ದುಲ್ ರಜಾಕ್‌, ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಗೌರವಾಧ್ಯಕ್ಷ ಇಸ್ಮಾಯಿಲ್, ಕುಶಾಲನಗರ‌ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನಗರಾಧ್ಯಕ್ಷ ಎಂ.ಜೆ ಇರ್ಫಾನ್, ಸುಂಟಿಕೊಪ್ಪದ ನಿಯಾಜ್ ಮಾತನಾಡಿದರು.

ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್.ಚಂದ್ರ ಮೋಹನ್, ಕುಶಾಲನಗರ ಜಾಮಿಯಾ ಮಸೀದಿ ಅಧ್ಯಕ್ಷ ಮೆಹತಾಬ್ ಅಹಮ್ಮದ್, ದಾನಿ ಅಂಜದ್, ಗರಗಂದೂರು ಗ್ರಾಪಂ ಮಾಜಿ ಉಪಾಧ್ಯಕ್ಷ ಮುಸ್ತಾಫ, ಪ್ರಮುಖರಾದ ಫೈಸಲ್ ಇ ಪಾಯದತ್ ವೇದಿಕೆಯಲ್ಲಿದ್ದರು.

ಟ್ರಸ್ಟ್ ಉಪಾಧ್ಯಕ್ಷ ಅಬ್ದುಲ್ ರಜಾಕ್ ಕೆ ಎ, ಪ್ರಧಾನ ಕಾರ್ಯದರ್ಶಿ ಎಸ್.ಆದಂ,ಖಜಾಂಚಿ ಕೆ.ಎಂ.ಮುಜೀಬ್, ಕಾನೂನು ಸಲಹೆಗಾರ ಸುಫಿಯಾನ ಎಂ.ಎಂ, ನಿರ್ದೇಶಕರಾದ ಹ್ಯಾರಿಸ್ ಎನ್.ಪಿ, ರಜಾಕ್ ಎಂ.ಕೆ, ಅಶ್ರಫ್ ಪಿ.ಎ,ಬಾಷಾ ಎಂ.ಎಸ್,ಆರೀಸ್ ಎಂ.ಎಂ,ಅನೀಸ್, ಆತಿಫ್ ಮುನ್ನ ಮತ್ತಿತರರು ಇದ್ದರು.

7 ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ 50 ಕ್ಕೂ ಅಧಿಕ ತಂಡಗಳು ಭಾಗಿಯಾಗಿವೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!