ಕಾಮಗಾರಿ

ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ವಿವಿಧೆಡೆ ರೂ 3 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ.ಮಂತರ್ ಗೌಡ ರಿಂದ ಭೂಮಿಪೂಜೆ

ಕುಶಾಲನಗರ, ಮೇ 08: ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ವಿವಿಧೆಡೆ ರೂ 3 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ.ಮಂತರ್ ಗೌಡ ಅವರು ಭೂಮಿಪೂಜೆ ನೆರವೇರಿಸಿದರು.

ಕುಶಾಲನಗರ ಗೊಂದಿ ಬಸವನಹಳ್ಳಿ ದೊಡ್ಡಮ್ಮ ತಾಯಿ ದೇವಸ್ಥಾನದ ಕಮಾನು ಉದ್ಘಾಟನೆ ಮತ್ತು ರಸ್ತೆ ಕಾಮಗಾರಿಗೆ, ಸಾಯಿ ಆಸ್ಪತ್ರೆಯ ಮುಂಭಾಗ ರಸ್ತೆಯ ಎರಡು ಬದಿ ಚರಂಡಿ, ಕರಿಯಪ್ಪ ಬಡಾವಣೆಯಲ್ಲಿ ರಸ್ತೆ, ಬೈಚನಹಳ್ಳಿ ಹಿಂದೂ ರುದ್ರ ಭೂಮಿಗೆ ಹೋಗುವ ರಸ್ತೆ, ಗುಂಡೂರಾವ್ ಬಡಾವಣೆ ಸಂಪರ್ಕ ರಸ್ತೆ, ಹಳೆ ಹೌಸಿಂಗ್ ಬೋರ್ಡ್ ಗೆ ತೆರಳುವ ರಸ್ತೆಯ, ಸಂತ ಸಭಾಸ್ಟಿನ್ ಚರ್ಚ್ ರಸ್ತೆಣ ಉರ್ದು ಶಾಲೆಗೆ ತೆರಳುವ ರಸ್ತೆ, ಸಾಬೂ ಲಾಲ್ ಮನೆಗೆ ಹೋಗುವ ರಸ್ತೆ , ಗುಮ್ಮನಕೊಲ್ಲಿಯಲ್ಲಿ ಸೆಲೆಕ್ಟ್ ಸಾ ಮಿಲ್ ಮುಂಭಾಗದ ಉಮಾ ಟೀಚರ್ ಮನೆಗಾಗಿ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಭೂಮಿ ಪೂಜೆ‌ ನೆರವೇರಿಸಿದರು.
ಈ ಸಂದರ್ಭ ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಪುರಸಭೆ ಮಾಜಿ ಸದಸ್ಯರಾದ ಜಿ.ಬಿ.ಜಗದೀಶ್, ಎಂ.ಎಂ.ಪ್ರಕಾಶ್, ಎಂ.ಬಿ.ಸುರೇಶ್, ಎಂ.ಕೆ.ದಿನೇಶ್, ಶಿವಶಂಕರ್, ಹರೀಶ್, ಮುಖ್ಯಾಧಿಕಾರಿ ಗಿರೀಶ್ ಸೇರಿದಂತೆ ಪಕ್ಷದ ಮುಖಂಡರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!