ಕ್ರೈಂ
ಹ್ಯಾಷಸ್ ಆಯಿಲ್ ಮಾರಾಟ ಜಾಲ: ಕೇರಳ ಮೂಲದ ಮೂವರ ಬಂಧನ
ಕುಶಾಲನಗರ, ಆ 30: ಕೊಡಗು ಜಿಲ್ಲೆಯಲ್ಲಿ ಹಶೀಶ್ ಆಯಿಲ್ ಮಾರಾಟ ಜಾಲ ಬಯಲಿಗೆ ಬಂದಿದೆ.
ಕೇರಳ ಮೂಲದ ಮೂವರು ಆರೋಪಿಗಳನ್ನು ಬಂಧಿಸಿ, ಬಂಧಿತರಿಂದ 10 ಲಕ್ಷ ಮೌಲ್ಯದ 1.116 ಗ್ರಾಂ ಹಶೀಶ್ ಆಯಿಲ್ ವಶಪಡಿಸಿಕೊಳ್ಳಲಾಗಿದೆ. ಭಾಗಮಂಡಲ ಠಾಣಾ ಪೊಲೀಸರಿಂದ ಕಾರ್ಯಾಚರಣೆ ನಡೆದಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಕಾರಿನ ತಪಾಸಣೆ ವೇಳೆ ವಿವಿಧ ನಂಬರ್ ಪ್ಲೇಟ್ ಗಳು, ಕಾರಿನ ಡಿಕ್ಕಿಯಲ್ಲಿ ಪ್ಲಾಸ್ಟಿಕ್ ಬಾಟಲಿಯಲ್ಲಿ ಹಶೀಶ್ ಆಯಿಲ್ ಪತ್ತೆ. ಕೇರಳ ಮೂಲದ ಅಹ್ಮದ್ ಕಬೀರ್ 37, ಅಬ್ದುಲ್ ಖಾದರ್ 27, ಮಹಮ್ಮದ್ ಮುಜಾಬಿಲ್ (22) ಬಂಧನ. ಆಂಧ್ರಪ್ರದೇಶದ ಗುಂಟೂರಿನಿಂದ ಮಾದಕ ದ್ರವ್ಯ ತಂದಿರುವುದಾಗಿ ಒಪ್ಪಿಕೊಂಡ ಆರೋಪಿಗಳು.