ಕಾರ್ಯಕ್ರಮ

ಕೂಡ್ಲೂರು ಇಂಡಸ್ಟ್ರಿಯಲ್ ಏರಿಯಾ ಕಾರ್ಮಿಕ ಘಟಕದ ವತಿಯಿಂದ ಕಾರ್ಮಿಕರ ದಿನಾಚರಣೆ: ಮೆರವಣಿಗೆ

ಕುಶಾಲನಗರ, ಮೇ 01:ಕೂಡ್ಲೂರು ಇಂಡಸ್ಟ್ರಿಯಲ್ ಏರಿಯಾ ಕಾರ್ಮಿಕ ಘಟಕದ ವತಿಯಿಂದ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು.

ಕಾರ್ಮಿಕ ಘಟಕದ ಅಧ್ಯಕ್ಷ ಮಂಜು ನೇತೃತ್ವದಲ್ಲಿ ಘಟಕದ ಸದಸ್ಯರು, ಕಾಫಿ ವರ್ಕ್ಸ್ ನ ಮಹಿಳಾ ಕಾರ್ಮಿಕರು ಕೈಗಾರಿಕಾ ಘಟಕದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿಬಂದು ಕಾರ್ಮಿಕರ ಪರ ಘೋಷಣೆಗಳನ್ನು ಮೊಳಗಿಸಿದರು.
ಎಸ್.ಎಲ್.ಎನ್ ವರ್ಕ್ಸ್ ಬಳಿಯಿಂದ ದೊಡ್ಡಮ್ಮ ತಾಯಿ ಬನದ ತನಕ ಮೆರವಣಿಗೆ ನಡೆಸಿದರು.
ಕೂಡ್ಲೂರು ಕೈಗಾರಿಕಾ ಕೇಂದ್ರದ ಹೆದ್ದಾರಿಯಲ್ಲಿ ಕೆಲಸ ಆರಂಭ ಮತ್ತು ಅಂತ್ಯದ ಸಮಯದಲ್ಲಿ ಸಾರಿಗೆ ಬಸ್ ನಿಲುಗಡೆಗೊಳಿಸಬೇಕಿದೆ, ಸುಸಜ್ಜಿತ ಬಸ್ ತಂಗುದಾಣ ಒದಗಿಸುವಂತೆ ಮಹಿಳೆಯರು ಆಗ್ರಹಿಸಿದರು.

ಈ ಸಂದರ್ಭ ಪಾಲ್ಗೊಂಡಿದ್ದ ಐ.ಎನ್.ಟಿ.ಯು.ಸಿ ಜಿಲ್ಲಾಧ್ಯಕ್ಷ ಬಿ.ಡಿ.ಅಣ್ಣಯ್ಯ ಮಾತನಾಡಿ, ಸರಕಾರ ಕಾರ್ಮಿಕರ ಸಮಸ್ಯೆಗಳಿಗೆ, ಬೇಡಿಕಗಳಿಗೆ ಸಮರ್ಪಕವಾಗಿ ಸ್ಪಂದಿಸಿ ಕಲ್ಯಾಣ ಯೋಜನೆಗಳನ್ನು ಸಮರ್ಪಕವಾಗಿ ಒದಗಿಸಿ ಕಾರ್ಮಿಕರ ಹಿತ ಕಾಯಬೇಕಿದೆ ಎಂದರು.
ಕಾರ್ಮಿಕ ಘಟಕದ ಅಧ್ಯಕ್ಷ ಮಂಜು ಮಾತನಾಡಿ, ಕೆಲವು ಕಾಫಿ ಘಟಕಗಳಲ್ಲಿ ತಾರತಮ್ಯ ಕೊನೆಗಾಣಬೇಕಿದೆ,‌ಸಮಾನ ವೇತನ ವ್ಯವಸ್ಥೆ ಜಾರಿಯಾಗಬೇಕಿದೆ. ಕಾರ್ಮಿಕರಿಗೆ ಅನುಕೂಲವಾಗುವಂತೆ ಸಾರಿಗೆ ಬಸ್ ಗಳು ನಿಲುಗಡೆಗೊಳಿಸುತ್ತಿಲ್ಲ. ಇದರ ವಿರುದ್ದ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಗುತ್ತದೆ ಎಂದು ಎಚ್ಚರಿಸಿದರು.
ಕಾರ್ಯದರ್ಶಿ ಶಾಂತ, ಖಜಾಂಚಿ ಪುಷ್ಪ, ಕೂಡುಮಂಗಳೂರು ಗ್ರಾಪಂ ಮಾಜಿ ಸದಸ್ಯೆ ಗೌರಮ್ಮ, ಸುಜಾತ, ರತ್ಮಮ್ಮ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!