ಕಾರ್ಯಕ್ರಮ

ಡಾ.ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನ್ ರಾಂ ಜಯಂತಿ: ಸಾಮಾಜಿಕ ಕ್ರಾಂತಿ ಪ್ರಶಸ್ತಿ” ಪ್ರದಾನ ಸಮಾರಂಭ

ಕುಶಾಲನಗರ ಮೇ.1.:-ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನವನ್ನು ಪ್ರಬಲವಾಗಿ ಜಾರಿಗೆ ತರುವ ಮೂಲಕ ಸಮಾನತೆ, ಸಹೋದರತ್ವ ಮತ್ತು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದ ಮಹಾನ್ ಮಾನವತವಾದಿ ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ್ ಅವರು ಎಂದು ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಡಾಕ್ಟರ್ ಜಮೀರ್ ಅಹ್ಮದ್ ಇಂದಿಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿ ಅಭಿಪ್ರಾಯಸಿದರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಬೆಂಗಳೂರು ಕರ್ನಾಟಕ ಪತ್ರಕರ್ತರ ಸಂಘ ( ರಿ) ಕೊಡಗು ಜಿಲ್ಲಾ ಘಟಕ ಹಾಗೂ ಕುಶಾಲನಗರ ಪ್ರೆಸ್ ಕ್ಲಬ್ (ರಿ) ಕುಶಾಲನಗರ ಸಂಗಮ ಟಿವಿ ಹಾಗೂ ವಂಶಿ ನ್ಯೂಸ್ ಸಹಯೋಗದೊಂದಿಗೆ ಇಲ್ಲಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಭಾರತರತ್ನ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಹಾಗೂ ಭಾರತದ ಮಾಜಿ ಉಪ ಪ್ರಧಾನಿ ಹಸಿರು ಕ್ರಾಂತಿ ಹರಿಕಾರ ಡಾಕ್ಟರ್ ಬಾಬು ಜಗಜೀವನ್ ರಾಮ್ ಜಯಂತಿ ಅಂಗವಾಗಿ ರಾಜ್ಯಮಟ್ಟದ “ಸಾಮಾಜಿಕ ಕ್ರಾಂತಿ ಪ್ರಶಸ್ತಿ” ಪ್ರಧಾನ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಇನ್ನೋರ್ವ ಮುಖ್ಯ ಅತಿಥಿಗಳಾದ ಭಾರದ್ವಾಜ್ ಕೆ ಆನಂದತೀರ್ಥ ಅವರು ಬಾಬು ಜಗಜೀವನ್ ರಾಮ್ ಅವರ ಬಗ್ಗೆ ಮಾತನಾಡಿ ಇವರು ಕೇಂದ್ರ ಸಚಿವರಾಗಿ ಸೇವಿ ಸಲ್ಲಿಸಿ ಜಾತ್ಯಾತೀತತೆ ಸಾಮಾಜಿಕ ಸಾಮರಸ್ಯ ಕೃಷಿ ಅರ್ಥಶಾಸ್ತ್ರ ಆಹಾರ ಉತ್ಪಾದನೆ ರಕ್ಷಣೆ ನಿರ್ವಹಣೆ ಕಾರ್ಮಿಕ ಕಲ್ಯಾಣ ಮಹಿಳಾ ಸಬಲೀಕರಣಕ್ಕೆ ಅವರ ಕೊಡುಗೆ ಅಪಾರ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಪ್ರೆಸ್ ಕ್ಲಬ್ ಅಧ್ಯಕ್ಷ ಡಾ. ಎಚ್ಎಮ್ ರಘುಕೋಟಿ ವಹಿಸಿದ್ದರು. ಸಮಾರಂಭದ ಉದ್ಘಾಟನೆಯನ್ನು ಕುಶಾಲನಗರ ತಾಲೂಕು ತಹಶೀಲ್ದಾರ್ ರವರಾದ ಕಿರಣ್ ಜಿ ಗೌರಯ್ಯ ಮಹಾನ್ ನಾಯಕರ ಫೋಟೋಗೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಕಿರುತೆರೆ ಕಲಾವಿದೆ ಹೆಚ್ಎಮ್ ಮೀನಾಕ್ಷಿ. ಉದ್ಯಮಿಗಳಾದ ಬಿಎಸ್ ಸದಾಶಿವ ಶೆಟ್ಟಿ. ಮುಖ್ಯೋಪಾಧ್ಯಾಯರಾದ ಟಿ.ಜಿ. ಪ್ರೇಮ್ ಕುಮಾರ್. ಕುರಿ ಮತ್ತು ಉಣ್ಣೆ ಸಹಕಾರ ಸಂಘದ ಅಧ್ಯಕ್ಷರಾದ ಡಿ ಆರ್ ಪ್ರಭಾಕರ್. ಗಣೇಶ್. ಮುಸ್ತಫ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ
ಶ್ರೀಮತಿ ಅರುಣಿ ಅಶೋಕ್. ಮೋಹನ್ ಕುಮಾರ್. ಗಣೇಶ ತೊರೆನೂರು. ಮೀನಾಕ್ಷಿ ಬೆಂಗಳೂರು. ಜಯಲಕ್ಷ್ಮಿ ಹೆಬ್ಬಾಲೆ. ಜಯಶ್ರೀ ಕರವೆ. ಮುಸ್ತಫ. ಗಣೇಶ. ಸದಾಶಿವ ಶೆಟ್ಟಿ. ಜಮೀರ ಅಹ್ಮೆದ್. ರವಿ ಆರ್ ಶಾಸ್ತ್ರಿ ಮತ್ತು ಕುಮಾರಿ ದಿಶಾ ನಿಡ್ತ ಮಲೆ ಸೇರಿದಂತೆ 12 ಮಂದಿ ಯನ್ನು ಶಾಲು ಹೊದಿಸಿ ಸನ್ಮಾನಿಸಿ ಫಲ ತಾಂಬೂಲ ನೀಡಿ ಗೌರವಿಸಲಾಯಿತು. ಅದೇ ರೀತಿ ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ರೆನಿತ್. ಗೌತಮಿ. ಸಂಸ್ಕೃತಿ. ದಿಶಾ. ರಂಜಿತ. ಭೂಮಿಕಾ. ಚಿರಾಗ್. ವೆನ್ಯ. ಪ್ರಯಾಗ್ ಮತ್ತು ತನ್ಮಯಿ ಇವರು ಗಳಿಗೆ ಶಿಕ್ಷಣ ಜ್ಙಾನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಲೋಕೇಶ್ ಪ್ರಾರ್ಥನೆ ಮಾಡಿದರೆ. ಶಿಕ್ಷಕಿ ರಶ್ಮಿ ಅವರು ನಿರೂಪಣೆ ಮಾಡಿದರು. ಸರ್ವರನ್ನು ಮಂಜು ಭಾರ್ಗವಿ ಸ್ವಾಗತಿಸಿದರು. ರಘು ಕೋಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!