ಕ್ರೈಂ

ಮಹಿಳೆಯ ಚಿನ್ನದ ಸರ ಕಸಿದು ಪರಾರಿ

ಕುಶಾಲನಗರ, ಏ 24: ಮನೆಗೆ ತೆರಳುತ್ತಿದ್ದ ಮಹಿಳೆಯ ದ್ವಿಚಕ್ರ ವಾಹನ ಅಡ್ಡಗಟ್ಟಿ ಚಿನ್ನದ ಸರ ರಾಬರಿ ಮಾಡಿ ಪರಾರಿಯಾದ ಘಟನೆ ಕೊಪ್ಪ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.

ಕುಶಾಲನಗರದ ಕೂಡ್ಲೂರಿನ ಎಸ್ ಎಲ್ ಎನ್ ಸಂಸ್ಥೆ ಉದ್ಯೋಗಿ ಶೃತಿ ಎಂಬವರು ಕೆಲಸ ಮುಗಿಸಿ ಆಸ್ಪತ್ರೆಗೆ ತೆರಳಿ ಬಳಿಕ ಗುಡ್ಡೇನಹಳ್ಳಿ ಮನೆಯತ್ತ ತೆರಳುವ ಮಾರ್ಗದಲ್ಲಿ ಭಾರತ ಮಾತಾ ಡಿಗ್ರಿ ಕಾಲೇಜು ರಸ್ತೆಯಲ್ಲಿ ಪಲ್ಸರ್ ಬೈಕ್ ನಲ್ಲಿ ಬಂದ ಆಗಂತುಕ ಮಹಿಳೆಯನ್ನು ಅಡ್ಡಗಟ್ಟಿ ಬೆದರಿಸಿ 10 ಗ್ರಾಂ ಚಿನ್ನದ ಸರ ಪರಾರಿಯಾಗಿದ್ದಾನೆ. ಈ ಬಗ್ಗೆ ಬೈಲುಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!