ಸಭೆ

ಕುಶಾಲನಗರ ಪೋಲಿಸ್ ಠಾಣೆಗಳ‌ ವ್ಯಾಪ್ತಿಯ ಲಾಡ್ಜ್, ಹೋಮ್ ಸ್ಟೇ ಮಾಲೀಕರ ಸಭೆ.

ಕುಶಾಲನಗರ, ಏ. 23: ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ಹೋಮ್ ಸ್ಟೇ ಮಾಲೀಕರು ಮತ್ತು ಪೋಲಿಸರ ಸಭೆ ಕುಶಾಲನಗರ ವೃತ್ತ ನಿರೀಕ್ಷಕರಾದ ದಿನೇಶ್ ಕುಮಾರ್, ಮತ್ತು ಪ್ರದೀಪ್ ಬಿ.ಆರ್ ರವರ ಅಧ್ಯಕ್ಷತೆಯಲ್ಲಿ ಆಯಾ ಠಾಣಾ ವ್ಯಾಪ್ತಿಯಲ್ಲಿ ನಡೆಯಿತು.
ಸಭೆಯಲ್ಲಿ ಕುಶಾಲನಗರ ವೃತ್ತ ನಿರೀಕ್ಷಕರಾದ ದಿನೇಶ್ ಕುಮಾರ್, ಹೋಮ್ ಸ್ಟೇ ಹಾಗೂ ಅದರ ಮಾಲೀಕರು ಅನುಸರಿಸಬೇಕಾದ ನಿಯಮಗಳ ಬಗ್ಗೆ ಸಮಗ್ರವಾಗಿ ತಿಳಿಸಿದರು.
ಹೋಮ್ ಸ್ಟೇ ಗಳಲ್ಲಿ ಕಡ್ಡಾಯವಾಗಿ ಸಿ.ಸಿ.ಕ್ಯಾಮರಾ ಅಳವಡಿಕೆ, ವಿದೇಶಿ ಪ್ರವಾಸಿಗರ ಸಮರ್ಪಕವಾದ ಮಾಹಿತಿಯನ್ನು ಪಡೆದು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸ್ಥಳೀಯ ಪೋಲಿಸ್ ಠಾಣೆಗೆ ನೀಡುವುದು, ಪ್ರವಾಸೋದ್ಯಮ ಇಲಾಖೆಯ ಪರವಾನಗಿ ಮತ್ತು ಅದರ ನವೀಕರಣ ಪಡಿಸಿಕೊಳ್ಳುವುದು, ಅದರ ದಾಖಲೆಗಳನ್ನು ಠಾಣೆಗೆ ಒದಗಿಸುವುದು,ಅಲ್ಲದೆ ಹೋಮ್ ಸ್ಟೇ ಗಳು ಹೊರ ರಾಜ್ಯದ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದರೆ ಅವರ ಅಧಾರ್ ಕಾರ್ಡ್ ಮತ್ತು ಅವರಿಗೆ ಸಂಬಂಧಿಸಿದ ದಾಖಲೆಯನ್ನು ಪರಿಶೀಲನೆ, ರಾತ್ರಿ 10 ಗಂಟೆಯ ನಂತರ ಡಿ ಜೆ ಬಳಕೆ ನಿಷೇಧ, ಸೇರಿದಂತೆ ಕಾನೂನಾತ್ಮಕವಾಗಿ ಇಲಾಖೆಯ ನಿಯಮಾನುಸಾರ ಹೋಮ್ ಸ್ಟೇಗಳನ್ನು ನಡೆಸುವುದರ ಬಗ್ಗೆ ಚರ್ಚಿಸಿ ಸೂಚನೆ ನೀಡಲಾಯಿತು
ಈ ಸಂದರ್ಭದಲ್ಲಿ ಕುಶಾಲನಗರ ಟೌನ್, ಗ್ರಾಮಾಂತರ ಠಾಣಾಧಿಕಾರಿಗಳು ಪೋಲಿಸ್ ಸಿಬ್ಬಂದಿ ವರ್ಗದವರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!