ಕುಶಾಲನಗರ, ಏ 23: ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳದ 2026-31 ನೇ ಸಾಲಿನ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕೊಡಗು ಜಿಲ್ಲೆಯ ಬಸವನಹಳ್ಳಿ ಸಹಕಾರ ಸಂಘದ ಅಧ್ಯಕ್ಷ, ಕೂಡಿಗೆ ಸಹಕಾರ ಸಂಘದ ನಿರ್ದೇಶಕ, ಲ್ಯಾಂಪ್ಸ್ ಸಹಕಾರ ಮಹಾಮಂಡಳದ ಕೊಡಗು ಜಿಲ್ಲಾ ನಿರ್ದೇಶಕ ಎಸ್. ಆರ್. ಅರುಣ್ ರಾವ್ ಆಯ್ಕೆಯಾಗಿದ್ದಾರೆ.
ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಸಂಘದ ಕಛೇರಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಎರಡೆರಡು ನಾಮಪತ್ರ ಸಲ್ಲಿಕೆಯಾಗಿದ್ದವು.
ನಂತರ ನಡೆದ ಚುನಾವಣೆಯಲ್ಲಿ ಕೊಡಗು ಜಿಲ್ಲೆಯ ಎಸ್.ಆರ್. ಅರುಣ್ ರಾವ್ ಗೆ 9 ಮತಗಳು, ಉಡುಪಿ ಜಿಲ್ಲೆಯ ರಾಘವನಾಯಕ್ ಗೆ 3 ಮತಗಳು ಲಭಿಸಿದವು.
ಉಪಾಧ್ಯಕ್ಷ ಸ್ಧಾನಕ್ಕೆ ಸಿದ್ದುಮಲಗೌಡ ಪಾಟಿಲ್, ಚಾಮರಾಜನಗರ ಜಿಲ್ಲೆಯ ಸುಬ್ರಹ್ಮಣ್ಯ ಸ್ಪರ್ಧಿಸಿದರು. ಇದರಲ್ಲಿ ಉಪಾಧ್ಯಕ್ಷರಾಗಿ ಸಿದ್ದುಮಲಗೌಡ ಪಾಟೀಲ 9 ಮತಗಳನ್ನು ಗಳಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಚುನಾವಣೆಯಲ್ಲಿ ಭಾಗವಹಿಸಲು 15 ಮಂದಿ ನಿರ್ದೇಶಕರಿಗೆ ಅವಕಾಶ ಇದ್ದರೂ ಸಹ 12 ಮಂದಿ ನಿರ್ದೇಶಕರು ಚುನಾವಣೆಯಲ್ಲಿ ಭಾಗವಹಿಸಿದ್ದರು 3 ಮಂದಿ ನಿರ್ದೇಶಕರು ಗೈರು ಹಾಜರಾಗಿದ್ದರು.
ಕೂಡಿಗೆಯಲ್ಲಿ ವಿಜಯೋತ್ಸವ:
ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸಹಕಾರ ಸಂಘದ ನಿರ್ದೇಶಕರು, ಸದಸ್ಯರು, ಕಾಂಗ್ರೆಸ್ ಪಕ್ಷದ ವಿವಿಧ ಘಟಕದ ಪದಾಧಿಕಾರಿಗಳು, ಯುವಕ ಸಂಘದ ಸದಸ್ಯರು, ಗ್ರಾಮಸ್ಥರು ಸೇರಿದಂತೆ ಹಲವು ಮಂದಿ ನೂತನ ಅಧ್ಯಕ್ಷರಿಗೆ ಸ್ವಾಗತಿಸಿ, ಗೌರವ ಸಲ್ಲಿಸಿ, ಸಿಹಿ ಹಂಚಿ ಪಟಾಕಿ ಸಿಡಿಸಿ ವಿಜಯೋತ್ಸವದ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಕಾಂಗ್ರೆಸ್ ಮುಖಂಡ ನಾಪಂಡ ಮುತ್ತಪ್ಪ, ಚಿಕ್ಕತ್ತೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪುರುಷೋತ್ತಮ, ಅಜ್ಜಳ್ಳಿ ರವಿ, ಜಿಲ್ಲಾ ಯುನಿಯನ್ ಸಹಕಾರ ಸಂಘದ ನಿರ್ದೇಶಕ ಎಸ್. ಆರ್. ಸುನಿಲ್ ರಾವ್, ಕೂಡಿಗೆ ಸಹಕಾರ ಸಂಘದ ನಿರ್ದೇಶಕ ಕೆ.ಪಿ.ರಾಜು, ರಾಮರಾವ್, ಕೂಡಿಗೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಅನಂತ, ಶಿವಕುಮಾರ್, ರಂಜನಿ, ಕೆ.ಎನ್ .ರಾಜು , ಕೆ.ಟಿ. ರಾಮು , ಕೆ.ಬಿ. ರಾಘವೇಂದ್ರ, ಮಲ್ಲೇಶ್, ಅರುಣ್ ಮಾದಪ್ಪ, ನವೀನ, ಸೇರಿದಂತೆ ಹಲವಾರು ಮಂದಿ ಗ್ರಾಮಸ್ಥರು ಹಾಜರಿದ್ದರು.
Back to top button
error: Content is protected !!