ಕುಶಾಲನಗರ, ಏ 17: ಕುಶಾಲನಗರದ ಮೂಕಾಂಬಿಕಾ ಪದವಿ ಪೂರ್ವ ಕಾಲೇಜಿನ ಎಸ್.ಆರ್.ರಮ್ಯಾರವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳಿಗೆ 582 ಅಂಕಗಳನ್ನು ಪಡೆದು ಪಡೆದು ಕಾಲೇಜಿಗೆ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇವರು ಕೂಡುಮಂಗಳೂರು ಗ್ರಾ.ಪಂ ನ ಸುಂದರನಗರದ ಕೆ.ಟಿ.ರಾಜು ಹಾಗೂ ಲಕ್ಷ್ಮಿ ದಂಪತಿಗಳ ಪುತ್ರಿಯಾಗಿದ್ದಾರೆ. ಹಾಗೆಯೇ ಮೂಕಾಂಬಿಕ ಪದವಿ ಪೂರ್ವ ಕಾಲೇಜಿನ ಎಂ.ಹರ್ಷಿಣಿ 600ಕ್ಕೆ 564 ಅಂಕಗಳನ್ನು ಪಡೆದಿದ್ದಾರೆ. ಇವರು ಸುಂದರನಗರದ ಗೀತಾರವರ ಪುತ್ರಿಯಾಗಿದ್ದಾರೆ.
ಇವರ ಸಾಧನೆಗೆ ಸಂಸ್ಥೆಯ ಪ್ರಾಂಶುಪಾಲರು, ಉಪನ್ಯಾಸಕ ವೃಂದದವರು, ಕುಟುಂಬಸ್ಥರು, ಸ್ನೇಹಿತರು ಹಾಗೂ ಗ್ರಾಮಸ್ಥರು ಅಭಿನಂದನೆಗಳನ್ನು ತಿಳಿಸಿದ್ದಾರೆ.
ಹೆಚ್ಚಿನ ಅಂಕಗಳನ್ನು ಪಡೆದು ಕಾಲೀಜಿನ ಹಾಗೂ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ ವಿದ್ಯಾರ್ಥಿನಿಯರಿಗೆ ಅಭಿನಂದನೆಗಳು. ಇವರ ಭವಿಷ್ಯ ಉಜ್ವಲವಾಗಲಿ ಎಂದು ಕೂಡುಮಂಗಳೂರು ಗ್ರಾ.ಪಂ ಪಂಚಾಯಿತಿ ಮಾಜಿ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರು ಹಾರೈಸಿದ್ದಾರೆ.
Back to top button
error: Content is protected !!