ಕುಶಾಲನಗರ, ಮಾ 16: ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎಎಫ್ಎಂಸಿ ಕಾಲೇಜು ಹಿಂಭಾಗದ ಬಡಾವಣೆಯಲ್ಲಿ ವಾಸವಿದ್ದ ಡಾ| ಪಾರ್ಥಸಾರಥಿ ಎಂಬುವವರ ಅಣ್ಣ ವಯೋವೃದ್ಧರಾಗಿದ್ದು ಸದರಿಯವರನ್ನು ನೋಡಿಕೊಳ್ಳುವ ಸಲುವಾಗಿ ಹೋಂ ನರ್ಸಿಂಗ್ (Care Taker) ಕೆಲಸಕ್ಕಾಗಿ ಕೊಪ್ಪಳ ಜಿಲ್ಲೆ ಮೂಲದ ಮಹಂತೇಶ ಪೂಜಾರ ಎಂಬಾತನನ್ನು ನೇಮಿಸಿದ್ದು, ಸವರಿ ವ್ಯಕ್ತಿಯು ದಿನಾಂಕ: 28-02-2026 ರಂದು ಮನೆಯಲ್ಲಿ ಇಟ್ಟಿದ್ದ ಅಂದಾಜು 80 ಗ್ರಾಂ ತೂಕದ ಚಿನ್ನಾಭರಣಗಳನ್ನು ಹಾಗೂ ರೂ. 5,50,000/- ನಗದು ಕಳವು ಮಾಡಿರುವ ಕುರಿತು ದೂರು ಸ್ವೀಕರಿಸಿದ್ದು, ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 3406 ಬಿಎನ್ಎಸ್ಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಹಿರಿಯ ಅಧಿಕಾರಿಗಳು ಹಾಗೂ ವೃತ್ತ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳು, ಅಪರಾಧ ಕೃತ್ಯ ಪರಿಶೀಲನಾ ತಜ್ಞರ ತಂಡ ಭೇಟಿ ನೀಡಿ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಾಕ್ಷಾಧಾರಗಳನ್ನು ಕಲೆ ಹಾಕಿ ತನಿಖೆ ಕೈಗೊಳ್ಳಲಾಗಿರುತ್ತದೆ.
ಸದರಿ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿ ಮಾಹಿತಿ ಸಂಗ್ರಹಿಸಿ ಆರೋಪಿ ಭದ್ರಪ್ಪ ಬಸಪ್ರ, ಹಡಪದ 27 ವರ್ಷ, ಮಣ್ಣೂರು ಗ್ರಾಮ, ದೇವರ ಹಿಪ್ಪರಗಿ ತಾ।।, ವಿಜಯಪುರ ಜಿಲ್ಲೆ ಎಂಬಾತನ್ನು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
ಸದರಿ ಪ್ರಕರಣದ ಆರೋಪಿ ಭದ್ರಪ್ಪ ಬಸಪ್ಪ ಹಡಪದ ಈತನು ಮಹಾಂತೇಶ ಪೂಚಾರ ಎಂಬುವವರ ಆಧಾರ್ ಕಾರ್ಡ್ನ ಪ್ರತಿಯನ್ನು ಬಳಸಿ ಹೋಂ ನರ್ಸಿಂಗ್ ಕೆಲಸಕ್ಕೆ ಸೇರಿರುವುದು ಹಾಗೂ 2025 ನೇ ಸಾಲಿನಲ್ಲಿ ದಾವಣಗೆರೆ ಜಿಲ್ಲೆಯ ಕೆ.ಟಿ.ಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿರುತ್ತದೆ.
ವಶಪಡಿಸಿಕೊಂಡ ಸ್ವತ್ತುಗಳ ವಿವರ,
1) 3 . 5,09,000/-
2) 137 ಗ್ರಾಂ ಚಿನ್ನಾಭಾರಣಗಳು.
3) 01 ಮೊಬೈಲ್
Back to top button
error: Content is protected !!