ಕ್ರೈಂ

ಭಾಗಮಂಡಲದ ಕುಂದಚೇರಿಯಲ್ಲಿ ಡಬಲ್ ಮರ್ಡರ್: ಆರೋಪಿ ಬಂಧನ

ದಿನಾಂಕ: 11-03-2026 ರಂದು ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಚೇರಿ ಗ್ರಾಮದ ನಿವಾಸಿಗಳಾದ ಯಶೋಧ ಹಾಗೂ ಕುಂಞರಾಮ ಎಂಬುವವರನ್ನು ಚಂದು ಎಂಬಾತನು ಕೊಲೆ ಮಾಡಿರುವ ಕುರಿತು ದೂರು ಸ್ವೀಕರಿಸಿದ್ದು, ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಕಲಂ: 103(1) ಬಿಎನ್ಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.

ಸದರಿ ಪ್ರಕರಣದ ಕೃತ್ಯ ನಡೆದ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಕುಂದಚೇರಿ ಗ್ರಾಮದ ನಿವಾಸಿಗಳಾದ ಯಶೋಧ ಹಾಗೂ ಕುಂಞರಾಮ ಎಂಬುವವರಿಗೆ 02 ವರ್ಷಗಳಿಂದ ಅನೈತಿಕ ಸಂಬಂಧ ಇರುವ ಬಗ್ಗೆ ಯಶೋಧಳ ಅಣ್ಣನಾದ ಚಂದು ಹೆಚ್.ಕೆ ಎಂಬಾತನಿಗೆ ಇಷ್ಟವಿಲ್ಲದ ಕಾರಣ ಜಗಳವಾಡಿ ಯಶೋಧ ಹಾಗೂ ಕುಂಞರಾಮ ಇಬ್ಬರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿರುತ್ತದೆ.

ಸದರಿ ಪ್ರಕರಣದ ಆರೋಪಿ ಚಂದು ಹೆಚ್.ಕೆ. 64 ವರ್ಷ, ಕುಂದಚೇರಿ ಗ್ರಾಮ ಎಂಬಾತನನ್ನು ತನಿಖಾ ತಂಡವು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!