ಕುಶಾಲನಗರ, ಮಾ 10: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರಿನ ಶ್ರೀ ವಿನಾಯಕ ಯುವಕ ಸಂಘದ ವತಿಯಿಂದ ಮುಖ್ಯ ರಸ್ತೆ ಬದಿ ಅಳವಡಿಸಿರುವ ಮೂರು ಸಿಸಿ ಕ್ಯಾಮೆರಾಗಳನ್ನು ಕೂಡುಮಂಗಳೂರು ಗ್ರಾಪಂ ಗೆ ಹಸ್ತಾಂತರ ಕಾರ್ಯ ನಡೆಯಿತು.
ಯುವಕ ಸಂಘದ ಅಧ್ಯಕ್ಷ ಸಿಸಿ ಸ್ವಾಮಿ ನೇತೃತ್ವದಲ್ಲಿ ಕೂಡುಮಂಗಳೂರು ಗ್ರಾಪಂ ಪಿಡಿಒ ಸಂತೋಷ್ ಅವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭ ಯುವಕ ಸಂಘದ ಉಪಾಧ್ಯಕ್ಷ ಕೃಷ್ಣ ಸಿ.ಎನ್, ಗ್ರಾಪ ಮಾಜಿ ಸದಸ್ಯೆ ಖತೀಜಾ, ಸದಸ್ಯರಾದ ಶ್ರೀನಿವಾಸ್, ಕೃಷ್ಣಕಾಂತ್, ಮೋನೇಶ್, ಕೃಷ್ಣೇಗೌಡ, ಮಧುಚಂದ್ರ, ಸುನಿಲ್ ಕುಮಾರ್, ಗಣೇಶ್, ಶಶಿಧರ್, ಶಿವಕುಮಾರ್, ಗ್ರಾಮಸ್ಥರಾದ ಮೂಡ್ಲಿ, ಸಣ್ಣಪ್ಪ, ರಾಮೇಗೌಡ, ಶಿವಣ್ಣ, ನಾಗೇಂದ್ರ ಮತ್ತಿತರರು ಇದ್ದರು.