ಕೂಡಿಗೆ,. ಫೆ 28: ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದ ಮಹಿಳಾ ನಿರ್ದೇಶಕರಾದ ಜಯಶ್ರೀ, ಮತ್ತು ಕೆ.ಕೆ. ಪವಿತ್ರರವರು ಕೂಡಿಗೆ ಕೊಪ್ಪಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಶೀಲಾಗಿದ್ದ ಹಿನ್ನೆಲೆಯಲ್ಲಿ ಸಹಕಾರ ಸಂಘದ ಆಡಳಿತ ಮಂಡಳಿಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಹಕಾರ ಸಂಘದ ಅಧ್ಯಕ್ಷ, ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್, ಉಪಾಧ್ಯಕ್ಷ ವಿ. ಬಸಪ್ಪ, ನಿರ್ದೇಶಕರಾದ ಕೃಷ್ಣ ಗೌಡ, ಕೆ. ಟಿ. ಅರುಣು ಕುಮಾರ್, ಕೆ.ಪಿ. ರಾಜು, ನಾಗರಾಜು, ಎಸ್. ಆರ್. ಅರುಣ್ ರಾವ್, ಕೆ.ಬಿ. ರಾಮಚಂದ್ರ, ಕುಮಾರ್, ರಮೇಶ್, ಎಸ್. ಎಸ್. ಕೃಷ್ಣ, ಜಯಶ್ರೀ, ಪವಿತ್ರ, ವೃತ್ತಿ ಪರ ನಿರ್ದೇಶಕರಾದ ಆರ್.ಕೆ. ನಾಗೇಂದ್ರ ,ಡಿ.ಎನ್.ಚಂದ್ರಶೇಖರ್, ಸಂಘದ ಮೇಲ್ವಿಚಾರಕ ಎಸ್. ಪಿ ಅಬ್ದುಲ್ ರಶೀದ್ , ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಪಿ.ಹರ್ಷ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.
Back to top button
error: Content is protected !!