ದೇವಾಲಯ

ಮುಳ್ಳುಸೋಗೆಯ ಶ್ರೀಮತ್ ಕನ್ನಂಬಾಡಿ ಅಮ್ಮನವರ ನೂತನ ದೇವಾಲಯ ಹಾಗೂ ದೇವಿಯ ಪುನರ್ ಪ್ರತಿಷ್ಠಾಪನೆಗೆ ಚಾಲನೆ

ಕುಶಾಲನಗರ, ಫೆ 19:ಮುಳ್ಳುಸೋಗೆ ಗ್ರಾಮದ ಶ್ರೀಮತ್ ಕನ್ನಂಬಾಡಿ ಅಮ್ಮನವರ ನೂತನ ದೇವಾಲಯ ಹಾಗೂ ದೇವಿಯ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಯಿತು.

ಫೆಬ್ರವರಿ 18, 19, 20 ರಂದು ಮೂರು ದಿನಗಳ‌ ಕಾಲ ವಿಜೃಂಭಣೆಯಿಂದ ಜರುಗಲಿರುವ ಪುನರ್ ಪ್ರತಿಷ್ಠಾನ ಮಹೋತ್ಸವ ಅಂಗವಾಗಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ‌ ಪೂಜಾ ಕೈಂಕರ್ಯ, ಹೋಮ, ಹವನಗಳನ್ನು ಹಮ್ಮಿಕೊಳ್ಳಲಾಗಿದೆ. ಬುಧವಾರ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ ಶುದ್ದಿ, ಮಹಾ ಸಂಕಲ್ಪ, ವಾಸ್ತು ರಕ್ಷೋಘ್ನ ಹೋಮ, ಪ್ರಸಾದ ಶುದ್ದಿ, ವಾಸ್ತು ಬಲಿ, ಬಿಂಬ ಪ್ರಸಾದ ಸಂಗ್ರಹ ನಂತರ ಮುಖ್ಯದ್ವಾರಕ್ಕೆ ಪೂಜೆ ಸಲ್ಲಿಸಿ ಉದ್ಘಾಟಿಸಲಾಯಿತು. ಗ್ರಾಮದ ಹಿರಿಯರಾದ ವಿಮಲ ವೀರಪ್ಪ ಅವರು‌ ನೂತನ ದ್ವಾರ ಉದ್ಘಾಟಿಸಿದರು.

ಗುರುವಾರ ಮಹಾ ಗಣಪತಿ ಹೋಮ, ಸಂಸ್ಕಾರ ಹೋಮ, ನೂತನ ಬಿಂಬಕ್ಕೆ ಸಂಸ್ಕಾರ, ಬಿಂಬಶುದ್ದಿ, ಕಳಶ ನವೀಕರಣ, ಪ್ರಾಯಶ್ಚಿತ್ತ ಜೋಮ, ಕಲಾಹೋಮ, ಕಲಾಕರ್ಷಣೆ ನಡೆಯಿತು.
ಅರ್ಚಕ ರಾಮಚಂದ್ರ ಭಟ್ ತಂಡದಿಂದ ಪೂಜಾ ವಿಧಿ ನೆರವೇರಿಸಲಾಯಿತು.

ಮುಳ್ಳುಸೋಗೆ ಸೇರಿದಂತೆ ಸುತ್ತಮುತ್ತಲಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪೂಜೋತ್ಸವದಲ್ಲಿ ಪಾಲ್ಗೊಂಡಿದ್ದರು.

ಶುಕ್ರವಾರ ಕಾವೇರಿ ನದಿಯಲ್ಲಿ ಗಂಗಾಪೂಜೆ ನೆರವೇರಿಸಿ ಕಳಶ ಮೆರವಣಿಗೆ, ಬ್ರಹ್ಮ ಕಲಶಾಭಿಷೇಕ, ಮಹಾಪೂಜೆ, ಮಹಾಮಂಗಳಾರತಿ ನಡೆಯಲಿದ್ದು
ಪೂಜೋತ್ಸವದಲ್ಲಿ ಆದಿಚುಂಚನಗಿರಿ ಮಠದ ಹಾಸನ-ಕೊಡಗು ಶಾಖೆಯ ಶ್ರೀ ಶಂಭುನಾಥ ಸ್ವಾಮೀಜಿ, ವಿರಾಜಪೇಟೆಯ ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ.

ಶ್ರೀಮತ್ ಕನ್ನಂಬಾಡಿ ಅಮ್ಮನವರ ಮತ್ತು ಮಾರಮ್ಮ ದೇವಸ್ಥಾನ ಸೇವಾ
ಸಮಿತಿ ಅಧ್ಯಕ್ಷ ಎಂ.ಎಚ್.ಅಣ್ಣೇಗೌಡ್ರು, ಉಪಾಧ್ಯಕ್ಷ ಎಂ.ಆರ್.ನಂಜುಂಡ, ಕಾರ್ಯದರ್ಶಿ ಆರ್.ಪ್ರವೀಣ್, ಖಜಾಂಚಿ ಎಂ.ವಿ.ದಾಸೇಗೌಡ, ನಿರ್ದೇಶಕರಾದ ಎಂ.ಟಿ.ರಘು, ಎಂ.ಪಳನಿಸ್ವಾಮಿ, ಎಂ.ಆರ್.ಮಹದೇವಪ್ಪ, ಎಂ.ಸಿ.ಸಂತೋಷ್, ಎಂ.ಬಿ.ಸುರೇಶ್ ಕುಮಾರ್, ಎಂ.ಹೆಚ್.ಚಂದ್ರಪ್ಪ, ಎಂ.ಎಸ್.ಪ್ರಸನ್ನ,ವಿ.ಎ.ದಿನೇಶ್, ಎಂ.ಕೆ.ಚಂದ್ರು,ಎಂ.ಜಿ.ಅಜಿತ್ ಕುಮಾರ್,ಡಿ.ಟಿ.ರಂಗಸ್ವಾಮಿ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!