ಕುಶಾಲನಗರ, ಫೆ 18: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಸುಂದರನಗರ ಗ್ರಾಮದ ಕೋರೆ ರಸ್ತೆಯ ಹಕ್ಕುಪತ್ರ ವಂಚಿತ ನಿವಾಸಿಗಳ ಸಭೆ ನಡೆಯಿತು.
ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆ ಕೊಡಗು ಜಿಲ್ಲಾಧ್ಯಕ್ಷ ಎಲ್ ಎಮ್ ನಾಗರಾಜು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು. ಕ್ಷೇತ್ರ ಶಾಸಕರ ಗಮನ ಸೆಳೆದು ಅವರನ್ನು ಗ್ರಾಮಕ್ಕೆ ಆಹ್ವಾನಿಸಿ ಸಮಸ್ಯೆಗಳನ್ನು ಅವರ ಮುಂದೆ ತೆರೆದಿಡಲು ಹಾಗೂ ಪರಿಹಾರ ಕೋರುವ ಬಗ್ಗೆ ಸಭೆಯಲ್ಲಿ ಸಲಹೆ ವ್ಯಕ್ತಗೊಂಡವು.
Back to top button
error: Content is protected !!