ಮನವಿ

ಹಾರಂಗಿ ಅಣೆಕಟ್ಟೆಯಿಂದ ನದಿಗೆ ನೀರು: ಕೂಡಲೇ ಸ್ಥಗಿತಗೊಳಿಸಲು ಒತ್ತಾಯ

ಅಣೆಕಟ್ಟೆಯಿಂದ ನದಿಗೆ ನೀರು ಹರಿಸುತ್ತಿರುವುದು

ಕುಶಾಲನಗರ, ಫೆ 16:ಕೊಡಗಿನ ಏಕೈಕ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯಿಂದ ಭಾನುವಾರದಿಂದ ನದಿಗೆ ನೀರು ಹರಿಸುತ್ತಿದ್ದು ಕೂಡಲೆ ಸ್ಥಗಿತಗೊಳಿಸುವಂತೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಭಾಸ್ಕರ್ ನಾಯಕ್ ಒತ್ತಾಯಿಸಿದ್ದಾರೆ. ಬೇಸಿಗೆ ಈಗಷ್ಟೇ ಪ್ರಾರಂಭವಾಗಿದೆ. ಅಣೆಕಟ್ಟೆಯಲ್ಲಿ ನೀರು ತುಂಬಾ ಕುಸಿತ ಕಂಡಿದ್ದು ಕೇವಲ 3 TMC ನೀರು ಮಾತ್ರ ಬಾಕಿ ಉಳಿದಿದ್ದು ಅದರಲ್ಲಿಯೂ ನೆನ್ನೆಯಿಂದ ಚಾನೆಲ್ ಮುಖಾಂತರ ನದಿಗೆ ಸುಮಾರು 366 cusec ನೀರನ್ನು ಅರಿಸುತ್ತಿರುವುದರಿಂದ ಅಣೆಕಟ್ಟೆಯ ನೀರಿನ ಮಟ್ಟ ತೀರಾ ಕುಸಿತ ಕಾಣಲಿದೆ. ಅಣೆಕಟ್ಟೆಯ ನೀರನ್ನು ಅವಲಂಬಿತರಾಗಿರುವ ಹಾರಂಗಿಯಿಂದ ಶಿರಂಗಾಲದವರೆಗೆ ರೈತರಿಗೆ ತೀರ ಸಂಕಷ್ಟ ಉಂಟಾಗಲಿದೆ. ಮತ್ತು ಸೋಮವಾರಪೇಟೆ ಜನರು ಕೂಡ ಹಾರಂಗಿ ನೀರನ್ನೆ ಕುಡಿಯಲು ಅವಲಂಬಿತರಾಗಿರುವುದರಿಂದ ಈ ಕೂಡಲೇ ಜಿಲ್ಲಾಡಳಿತ ಮತ್ತು ಸರ್ಕಾರ ಇತ್ತ ಗಮನ ಹರಿಸಿ ಈ ಕೂಡಲೇ ನದಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಅಣೆಕಟ್ಟೆಯ ಎದುರು ಉಗ್ರ ಹೋರಾಟವನ್ನು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!