ಕ್ರೀಡೆ

ಲೆಜೆಂಡ್ ಪ್ರೀಮಿಯರ್ ಲೀಗ್: ಗೆಳೆಯರ ಬಳಗದ ವತಿಯಿಂದ ಜರ್ಸಿ ಬಿಡುಗಡೆ

ಕುಶಾಲನಗರ,ಫೆ೧೧: ಕುಶಾಲನಗರದಲ್ಲಿ ನಡೆಯುತ್ತಿರುವ ಲೆಜೆಂಡ್ಸ್ ಪ್ರೀಮಿಯರ್ ಲೀಗ್ ಸೀಜ಼ನ್ ೫ ರ ಪಂದ್ಯಾವಳಿಯ ಹಿನ್ನಲೆ ಕುಶಾಲನಗರದ “ಟೀಂ ಗೆಳೆಯರ ಬಳಗ” ತಂಡದ ವತಿಯಿಂದ ಕುಶಾಲನಗರದ ಟಾಪ್ ಇನ್ ಟೌನ್ ಸಭಾಂಗಣದಲ್ಲಿ ಜರ್ಸಿ ಬಿಡುಗಡೆ ಕಾರ್ಯಕ್ರಮ ನಡೆಸಲಾಯಿತು.
ಗೆಳೆಯರ ಬಳಗದ ಅಧ್ಯಕ್ಷರಾದ ವಿ.ಎಸ್.ಆನಂದ್ ಕುಮಾರ್ ಅವರು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಲೆಜೆಂಡ್ಸ್ ಪ್ರೀಮಿಯರ್ ಲೀಗ್ ನಲ್ಲಿ ನಮ್ಮ ತಂಡ ಭಾಗಿಯಾಗುತ್ತಿದೆ. ಸೋತಾಗ ಕುಗ್ಗದೇ, ಗೆದ್ದಾಗ ಹಿಗ್ಗದೇ ಕ್ರೀಡಾಸ್ಪೂರ್ತಿಯಿಂದ ಪಂದ್ಯಾವಳಿಯಲ್ಲಿ ಆಟಗಾರರು ಭಾಗವಹಿಸಬೇಕು. ತಂಡಕ್ಕೆ ಬೆಂಬಲವನ್ನು ನೀಡಿದ ಎಲ್ಲಾ ಗೆಳೆಯರ ಬಳಗದವರಿಗೆ ಹಾಗೂ ಎಲ್ಲಾ ಹಿತೈಷಿಗಳಿಗೆ ಧನ್ಯವಾದಗಳು ಎಂದರು.
ಪತ್ರಕರ್ತರು ಹಾಗೂ ಗೆಳೆಯರ ಬಳಗ ತಂಡದ ಆಟಗಾರರಾದ ಟಿ.ಆರ್.ಪ್ರಭುದೇವ್ ಅವರು ಮಾತನಾಡಿ, ಗೆಳೆಯರ ಬಳಗ ತಂಡ ಹಲವು ವರ್ಷಗಳಿಂದ ಜನಪ್ರಿಯ ಕೆಲಸಗಳನ್ನು‌ ಮಾಡುತ್ತಾ, ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆದ ಸಂಘಟನೆಯಾಗಿದೆ ಎಂದರು.
ಟೀಂ ಗೆಳೆಯರ ಬಳಗ ತಂಡದ ನಾಯಕರಾದ ಪೆಮ್ಮಯ್ಯರವರು ತಂಡದ ಆಟಗಾರರಿಗೆ ಜರ್ಸಿ ವಿತರಿಸಿದರು.
ಈ ಸಂದರ್ಭ ಗೆಳೆಯರ ಬಳಗದ ಹಿರಿಯರಾದ ವಸಂತ್ ಕುಮಾರ್, ವಿಮಲ್ ಕೆ ಜೈನ್, ನಾಗೇಶ್, ಬಾಷಾ, ಜಯಪ್ರಕಾಶ್, ನರೇಂದ್ರ, ಉದ್ಯಮಿಗಳಾದ ಇರ್ಫಾನ್, ಅಜ಼ೀಜ಼್ ಹಾಗೂ ಇನ್ನಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!