ಕುಶಾಲನಗರ, ಫೆ 10:ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾರಂಗಿ ಗ್ರಾಮದಲ್ಲಿ ಹಿಂದೂ ರುದ್ರಭೂಮಿಗೆ ಕಾಯಕಲ್ಪ ದೊರಕಿದೆ, ಈ ಕುರಿತು ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭಾಸ್ಕರ್ ನಾಯಕ್ ರವರು ಹಾರಂಗಿ ಗ್ರಾಮದ ರುದ್ರ ಭೂಮಿಯಲ್ಲಿ ಮಳೆಗಾಲದಲ್ಲಿ ಸವಸಂಸ್ಕಾರ ಮಾಡಲು ಸರಿಯಾದ ವ್ಯವಸ್ಥೆ ಇಲ್ಲದೆ ಪರದಾಡುವಂತ ಸ್ಥಿತಿ ಎದುರಾಗಿತ್ತು ಮತ್ತು ಬೇಸಿಗೆ ಸಂದರ್ಭ ಸವಸಂಸ್ಕಾರ ಮಾಡಲು ಹೆಚ್ಚಾಗಿ ಮರದ ಕಟ್ಟಿಗೆಗಳು ಬೇಕಾಗಿರುವುದರಿಂದ ಸಮಸ್ಯೆ ಉಂಟಾಗಿದ್ದು ಇದನ್ನು ಮನಗಂಡು
ಗ್ರಾಮ ಪಂಚಾಯಿತಿ ಅನುದಾನದಲ್ಲಿ ಸುಮಾರು
6 ಲಕ್ಷ ವೆಚ್ಚದಲ್ಲಿ ಅಂತಂತವಾಗಿ ಸುಸಜ್ಜಿತ
ಕಟ್ಟಡವನ್ನು ನಿರ್ಮಾಣ ಮಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘಕ್ಕೆ ಮನವಿ ಮಾಡಿ ಸಂಘದ ಮುಖಾಂತರ 2 ಲಕ್ಷ ಮೌಲ್ಯದ ಸವಸುಡುವ ಚೇಂಬರ್ ಅಳವಡಿಕೆ ಮಾಡಲಾಗಿದ್ದು ಅಗತ್ಯ ಸೌಲಭ್ಯಗಳು ಒಳಗೊಂಡ ಸ್ಮಶಾನ ಬಳಕೆಗೆ ಮುಕ್ತ ಎಂದು ಮಾಹಿತಿ ನೀಡಿದರು ಈ ಸಂದರ್ಭ ಸದಸ್ಯರುಗಳಾದ ಮಣಿಕಂಠ, ಲಕ್ಷ್ಮಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು
Back to top button
error: Content is protected !!