ಕಾಮಗಾರಿ

ಯೋಗಾನಂದ ಬಡಾವಣೆಯಲ್ಲಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಪುರಸಭೆಯಿಂದ ಅಂದಾಜು ಪಟ್ಟಿ: ಕರವೇಯಿಂದ ಶಾಸಕರಿಗೆ ಪ್ರಸ್ತಾವನೆ

ಕುಶಾಲನಗರ, ಫೆ 04: ಯೋಗಾನಂದ ಬಡಾವಣೆಯಲ್ಲಿ ಶ್ರೀ ಮುತ್ತಪ್ಪ ದೇವಾಲಯ ಬಳಿ ಕಾಂಕ್ರಿಟ್ ರಸ್ತೆ, ಚರಂಡಿ ಮತ್ತು ಕಲ್ವರ್ಟ್ ನಿರ್ಮಾಣಕ್ಕೆ ಅನುದಾನ ಕೋರಿ ಶಾಸಕರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಡಾ.ಬಿ.ಎ.ದಿನೇಶ್ ಶೆಟ್ಟಿ ತಿಳಿಸಿದರು.
ಅವ್ಯವಸ್ಥೆಯಿಂದ ಕೂಡಿರುವ ಚರಂಡಿ ಬಗ್ಗೆ ಇತ್ತೀಚಿಗೆ ಕರವೇ ಪ್ರಮುಖರು ಧ್ವನಿ ಎತ್ತಿ ಪುರಸಭೆ ಗಮನ ಸೆಳೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಪುರಸಭೆ ಅಭಿಯಂತರ ಚಿದಾನಂದ ಅವರು ಕರವೇ ಪ್ರಮುಖರೊಂದಿಗೆ ಸ್ಥಳಕ್ಕೆ ‌ಭೇಟಿ ನೀಡಿ ಪರಿಶೀಲಿಸಿದರು.

ಪುರಸಭೆಯಿಂದ
50 ಮೀ ಕಾಂಕ್ರಿಟ್ ರಸ್ತೆ ನಿರ್ಮಾಣ, 30 ಮೀ ಉದ್ದಕ್ಕೆ ಡ್ರೈನೇಜ್, 20 ಅಡಿ ಕಲ್ವರ್ಟ್ ನಿರ್ಮಾಣಕ್ಕೆ ಅಂದಾಜು ಪಟ್ಟಿ ಸಿದ್ದಪಡಿಸಲಾಗುತ್ತಿದೆ. ಇದನ್ನು ಕರವೇ ಮೂಲಕ ಶಾಸಕರಿಗೆ ಪ್ರಸ್ತಾವನೆ ಸಲ್ಲಿಸಿ ಅನುದಾನಕ್ಕೆ ಮನವಿ ಮಾಡಲಾಗುವುದು ಎಂದು ಕರವೇ ಜಿಲ್ಲಾಧ್ಯಕ್ಷ ದಿನೇಶ್ ಶೆಟ್ಟಿ ಮಾಹಿತಿ ನೀಡಿದರು.
ಕೆಲವೇ ದಿನಗಳಲ್ಲಿ ಮುತ್ತಪ್ಪ ತೆರೆ ಮಹೋತ್ಸವ ನಡೆಯಲಿದ್ದು ಸಾವಿರಾರು ಮಂದಿ ಭಕ್ತರು ಆಗಮಿಸುವ ಮಾರ್ಗದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಚರಂಡಿ ಬಾಯ್ತೆರೆದು ಕೂತಿದೆ. ಆದಷ್ಟು ಬೇಗ ಈ ಸಮಸ್ಯೆ ಇತ್ಯರ್ಥವಾಗಬೇಕಿದೆ ಎಂದು ಕರವೇ ನಗರಾಧ್ಯಕ್ಷ ಎಂ.ಎಸ್.ಮಣಿಕಂಠ ‌ಆಗ್ರಹಿಸಿದರು.
ಈ ಸಂದರ್ಭ ಸ್ಥಳೀಯ ನಿವಾಸಿ ಹರೀಶ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!