ಕಾರ್ಯಕ್ರಮ

ಹಕ್ಕೆ-ಹುಲುಸೆ ಗ್ರಾಮಸ್ಥರಿಗೆ ಲಭ್ಯವಾದ ಬಸ್ ತಂಗುದಾಣ: ನೂತನ ತಂಗುದಾಣ ಉದ್ಘಾಟಿಸಿದ ಶಾಸಕರು

ಕುಶಾಲನಗರ, ಜ 24:ಸಂಘಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ಯೋಜನೆಗಳು ಗ್ರಾಮಗಳ ವಿಕಸನಕ್ಕೆ ಸಹಕಾರಿಯಾಗಲಿದೆ ಎಂದು ಶಾಸಕ ಡಾ.ಮಂತರ್ ಗೌಡ ತಿಳಿಸಿದರು.

ಕುಶಾಲನಗರ ರೋಟರಿ ಸಂಸ್ಥೆ ಮೂಲಕ ಕಣಿವೆಯ ಹಕ್ಕೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಬಸ್ ತಂಗುದಾಣ ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರದ ಜೊತೆಯಲ್ಲಿ ಸಂಘಸಂಸ್ಥೆಗಳು ಕೂಡ ಸಮಾಜದ ಅಭಿವೃದ್ದಿಯಲ್ಲಿ ಕೈಜೋಡಿಸುತ್ತಿರುವ ಕಾರಣ ಜನಸಾಮಾನ್ಯರಿಗೆ ಅನುಕೂಲಕರ ವಾತಾವರಣ ನಿರ್ಮಾಣಗೊಳ್ಳುತ್ತಿದೆ. ಸೇವೆಗೆ ಹೆಸರಾದ ರೋಟರಿಯ ಹತ್ತು ಹಲವು ಸಾಮಾಜಿಕ ಯೋಜನೆಗಳು ಸದಾ ಸ್ಮರಣೀಯ ಎಂದರು.
ಕುಶಾಲನಗರ ತಾಲೂಕಿನಲ್ಲಿ ನೂತನ ಬಸ್ ಡಿಪೋ ಚಾಲನೆ ಬಳಿಕ ಸಹಜವಾಗಿ ಬಸ್ ರೂಟ್ ಹೆಚ್ಚಾಗಲಿದೆ. ಈ ಸಂದರ್ಭ ಹೆಚ್ಚಿನ ಬಸ್ ತಂಗುದಾಣಗಳು ಬೇಕಾಗುತ್ತದೆ. ಈಗಾಗಲೆ ಕಣಿವೆಯಲ್ಲಿ ಕೂಡ ತಂಗುದಾಣ ನಿರ್ಮಾಣಕ್ಕೆ ಅನುದಾನ ಒದಗಿಸಲಾಗಿದೆ‌. ಸರಕಾರದ ಶಕ್ತಿ ಯೋಜನೆ ಮನೆಮಾತಾಗಿದ್ದು ಮತ್ತಷ್ಟು ಇದರ ಸದ್ಬಳಕೆ‌ ಆಗಬೇಕಿದೆ. ತಂಗುದಾಣಗಳಲ್ಲು ಸ್ವಚ್ಚತೆ ಕಾಪಾಡುವಂತೆ ಶಾಸಕರು ಕೋರಿದರು.
ಕುಶಾಲನಗರ ರೋಟರಿ ಅಧ್ಯಕ್ಷ ಮನು ಪೆಮ್ಮಯ್ಯ ಮಾತನಾಡಿ, ಮಾರ್ಗದಲ್ಲಿ ಹೆದ್ದಾರಿ ನಿರ್ಮಾಣ ಸಂದರ್ಭ ಹಲವು ತಂಗುದಾಣಗಳು ನೆಲಸಮಗೊಳಿಸಿ ಪುನರ್ ನಿರ್ಮಿಸಿರಲಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳಿಗು, ಪ್ರಯಾಣಿಕರು ಅನಾನುಕೂಲ ಎದುರಿಸುವಂತಾಗಿತ್ತು.
ರೋಟರಿ ಸುವರ್ಣ ಮಹೋತ್ಸವ ಸಂಭ್ರಮಾಚರಣೆಗೆ ಅಣಿಯಾಗುತ್ತಿದೆ. ಅದರ ಅಂಗವಾಗಿ ನಮಗೆ ಬಂದ ಮನವಿ ಪರಿಶೀಲಿಸಿ ಇಲ್ಲಿ ಬಸ್ ತಂದುದಾಣದ ಅವಶ್ಯಕತೆ ಮನಗಂಡು ಕಾಮಗಾರಿಗೆ ಚಾಲನೆ ನೀಡಿ ಇಂದು ನೂತನ ತಂಗುದಾಣ ಉದ್ಗಾಟಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಹೆಬ್ಬಾಲೆ ಗ್ರಾಪಂ ಉಪಾಧ್ಯಕ್ಷೆ ಲತಾ, ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಕೆಪಿಸಿಸಿ ಸಂಯೋಜಕ ನಟೇಶ್ ಗೌಡ, ಜಿಪಂ ಮಾಜಿ ಅಧ್ಯಕ್ಷ ಹೆಚ್.ಎಸ್.ಅಶೋಕ್, ಹೆಚ್.ಶಿವರಾಮೇಗೌಡರ ಕರವೇ ಜಿಲ್ಲಾಧ್ಯಕ್ಷ ಡಾ.ಬಿ.ಎ.ದಿನೇಶ್ ಶೆಟ್ಟಿ, ರೋಟರಿ ಕಾರ್ಯದರ್ಶಿ ಮಂಜುನಾಥ್, ಸಾಮಾಜಿಕ ಹೋರಾಟಗಾರ ಮೋಹನ್, ಕೂಡಿಗೆ ಗ್ರಾಪಂ ಸದಸ್ಯ ಅನಂತ್, ಮುಖಂಡ ಹೆಬ್ಬಾಲೆ ರಾಜಶೇಖರ್, ರೋಟರಿ ಪ್ರಮುಖರಾದ ಉಲ್ಲಾಸ್ ಕೃಷ್ಣ, ಎಸ್.ಕೆ.ಸತೀಶ್, ಶೋಭಾ ಸತೀಶ್, ಹರಿ ಎ ಶೆಟ್ಟಿ, ಆರತಿ ಶೆಟ್ಟಿ, ಕೆ.ಎಸ್..ರಾಜಶೇಖರ್, ಮಹೇಶ್ ನಲವಾಡ್, ಜೇಕಬ್, ಟಿ.ವಿ.ರವಿ, ರಂಗಸ್ವಾಮಿ ಸೇರಿದಂತೆ ಗ್ರಾಮದ ಪ್ರಮುಖರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!