ಆರೋಪ

ಕುಶಾಲನಗರ ಅಹಿಲಿ ಚಿಟ್ಸ್ ವಿರುದ್ದ ವ್ಯವಹಾರದಾರರ ಆರೋಪ

ಸತೀಶ್ ಗೆ 7 ಲಕ್ಷ, ರಂಜಿತ್ ಗೆ 5.98 ಲಕ್ಷ ರೂ‌ ಪಾವತಿಸದ ಬಗ್ಗೆ ಆರೋಪ

ಕುಶಾಲನಗರ, ಜ 21: ಕುಶಾಲನಗರದ ಅಹಿಲಿ ಚಿಟ್ಸ್ ಪ್ರೈ ಲಿ ನಲ್ಲಿ ಚೀಟಿ ವ್ಯವಹಾರ ನಡೆಸಿದವರಿಗೆ ಸಕಾಲದಲ್ಲಿ‌ ಹೂಡಿಕೆ ಹಣ ಪಾವತಿಸದೆ ಸತಾಯಿಸಲಾಗುತ್ತಿದೆ ಎಂದು ಸತೀಶ್ ಮತ್ತು ರಂಜಿತ್ ಎಂಬವರು ಆರೋಪಿಸಿದ್ದಾರೆ.

ಚೀಟಿ ವ್ಯವಹಾರಕ್ಕೆ ಹೂಡಿಕೆ ಮಾಡಿದ ಹಣದಲ್ಲಿ ತಲಾ 5 ಲಕ್ಷಕ್ಕೂ ಅಧಿಕ ಹಣ ಸಂಸ್ಥೆಯಿಂದ ಇದುವರೆಗೆ ನಮಗೆ ಪಾವತಿಯಾಗಿಲ್ಲ. ಕೇಳಿದರೆ ಹಣ ನೀಡುವ ಬಗ್ಗೆ ಸಮಯ ಪಡೆದು ಮುಂದೂಡಿಕೊಂಡು ಬರುತ್ತಿರುವುದಾಗಿ ಆರೋಪಿಸಿದ್ದಾರೆ. ಈ‌ ಬಗ್ಗೆ ಕುಶಾಲನಗರ ಪೊಲೀಸ್ ಠಾಣೆಗೆ ಕೂಡ ದೂರು ನೀಡಲಾಗಿದೆ. ಆದರೂ ಕೂಡ ಸಂಸ್ಥೆ ಮುಖ್ಯಸ್ಥ ಶ್ರೀನಿವಾಸನ್  ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಸ್ಥಳೀಯ ಮುಖಂಡರ ಮಾತಿಗೂ ಮನ್ನಣೆ ನೀಡದ ಕಾರಣ ನೊಂದ ಗ್ರಾಹಕರು ಸ್ಥಳೀಯ ಸಂಘಸಂಸ್ಥೆಗಳ ಸಹಕಾರ ಪಡೆದು ಸಂಸ್ಥೆ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!