ಕ್ರೈಂ

ಕೊಡಗಿನ ಹೆಣ್ಣುಮಕ್ಕಳ ಬಗ್ಗೆ‌ ಹೀನಾಯ ಹೇಳಿಕೆ: ಕೊಡಗು ಅಭಿವೃದ್ಧಿ ಸಮಿತಿಯಿಂದ ಪೊಲೀಸ್ ದೂರು

ಕುಶಾಲನಗರ, ಜನವರಿ 12: ಕೊಡಗಿನ ಹೆಣ್ಣುಮಕ್ಕಳ ಬಗ್ಗೆ ಹೀನಾಯ ಹಾಗೂ ಅವಮಾನಕಾರಿ ಹೇಳಿಕೆ ನೀಡಿದ* *ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊಡಗು ಅಭಿವೃದ್ಧಿ ಸಮಿತಿಯ* *ವತಿಯಿಂದ ಕುಶಾಲನಗರ ಪೊಲೀಸ್* ಠಾಣೆಯಲ್ಲಿ ಅಧಿಕೃತ ದೂರು ಸಲ್ಲಿಸಲಾಯಿತು.

ದೂರು ಸಲ್ಲಿಸುವ ವೇಳೆ ಕೊಡಗು ಅಭಿವೃದ್ಧಿ ಸಮಿತಿಯ ಜಿಲ್ಲಾಧ್ಯಕ್ಷರಾದ ಪ್ರಸನ್ನ ಭಟ್, ಗೌರವಾಧ್ಯಕ್ಷರಾದ ಮಾದಪ್ಪ, ಜಿಲ್ಲಾ ಪ್ರಧಾನ ಸಂಘಟನಾ ಕಾರ್ಯದರ್ಶಿ ಎಂ.ಎಂ.ದಾವುದ್, ಸಂಘಟನಾ ಕಾರ್ಯದರ್ಶಿ ಪ್ರಮೋದ್ ಶೆಟ್ಟಿ, ಜಿಲ್ಲಾ ಮಹಿಳಾ ಕಾರ್ಯದರ್ಶಿ ಗೀತಾ ಹಾಗೂ ಗೌರವ ಸಲಹೆಗಾರರಾದ ಯಾದವ ರಾವ್ ಉಪಸ್ಥಿತರಿದ್ದರು.

ದೂರು ಸ್ವೀಕರಿಸಿದ ಕುಶಾಲನಗರ ಠಾಣಾಧಿಕಾರಿಗಳು ಸಮಿತಿಗೆ ಸ್ವೀಕೃತಿ ರಸೀದಿ ನೀಡಿದ್ದು, ಸಂಬಂಧಿಸಿದ ವ್ಯಕ್ತಿಯ ವಿರುದ್ಧ ನಿಷ್ಪಕ್ಷಪಾತ ಹಾಗೂ ಕಟ್ಟುನಿಟ್ಟಿನ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಕೊಡಗಿನ ಹೆಣ್ಣುಮಕ್ಕಳ ಗೌರವ, ಆತ್ಮಗೌರವ ಮತ್ತು ಸುರಕ್ಷತೆಗೆ ಧಕ್ಕೆಯಾಗುವ ಯಾವುದೇ ಹೇಳಿಕೆಗಳು ಅಥವಾ ಕೃತ್ಯಗಳನ್ನು ಕೊಡಗು ಅಭಿವೃದ್ಧಿ ಸಮಿತಿ ತೀವ್ರವಾಗಿ ಖಂಡಿಸುತ್ತಿದ್ದು, ಇಂತಹ ವಿಚಾರಗಳಲ್ಲಿ ಕಾನೂನು ಕ್ರಮ ಅನಿವಾರ್ಯವೆಂದು ಸಮಿತಿ ತಿಳಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!