ರಾಜಕೀಯ

ಮೊಟ್ಟೆ ಒಡೆದ ಕೃತ್ಯ ತಪ್ಪು. ಬಿಜೆಪಿ ಸಮಾವೇಶಕ್ಕೆ ಒಂದು ಲಕ್ಷ ಜನ ಸೇರ್ಪಡೆ

ಮೊಟ್ಟೆ ಒಡೆದ ಕೃತ್ಯದ ಬಗ್ಗೆ ಶಾಸಕ ಅಪ್ಪಚ್ಚುರಂಜನ್ ಪ್ರತಿಕ್ರಿಯೆ

ಕುಶಾಲನಗರ, ಆ 22: ಮಾಜಿ‌ ಮುಖ್ಯಮಂತ್ರಿ ಕಾರಿಗೆ ಮೊಟ್ಟೆ ಒಡೆದ ಕೃತ್ಯ ತಪ್ಪು. ಮೊಟ್ಟೆ ಒಡೆದವರು ಯಾರೇ ಆಗಿದ್ದರೂ ಕೂಡ ಅಂತಹ ಕೃತ್ಯ ಸಮರ್ಥಿಸಿಕೊಳ್ಳುವುದಿಲ್ಲ ಎಂದು‌ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಹೇಳಿದರು.
ಹಾರಂಗಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ‌ ಮಾತನಾಡಿದ ಅವರು, 26 ರಂದು ಮಡಿಕೇರಿಯಲ್ಲಿ ನಡೆಯುವ ಬಿಜೆಪಿ‌ ಜನಜಾಗೃತಿ ಸಮಾವೇಶಕ್ಕೆ‌ ಕನಿಷ್ಠ ಒಂದು ಲಕ್ಷ ಜನ ಸೇರಿಸಲಾಗುವುದು.‌ ಈ‌ ಮೂಲಕ ಕಾಂಗ್ರೆಸ್ ನ ಒಡೆದಾಳುವ‌ ನೀತಿಯ ಬಗ್ಗೆ ಜನಜಾಗೃತಿ‌ ಮೂಡಿಸಲಾಗುವುದು ಎಂದರು.
ಓರ್ವ ಮಾಜಿ‌ ಮುಖ್ಯಮಂತ್ರಿ ಮಾತನಾಡುವ ಸಂದರ್ಭ ನಾಲಗೆ ಹರಿಬಿಡಬಾರದು.‌ ಹಿರಿಯ ರಾಜಕಾರಣಿ ತಮ್ಮ ವಯಸ್ಸಿಗೆ ತಕ್ಕಂತಹ ಹೇಳಿಕೆಗಳನ್ನು‌ ನೀಡಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಟಿಪ್ಪು ಜಯಂತಿ‌ ಆಚರಣೆಗೆ‌ ಬಂದದ್ದು. ಈ‌ ಮೂಲಕ ಕೊಡಗು ಸೇರಿದಂತೆ ರಾಜ್ಯದಲ್ಲಿ ಧರ್ಮಗಳ‌ ನಡುವೆ‌ ಬೆಂಕಿ ಹಚ್ಚುವ ಕೆಲಸ‌ ಮಾಡಿದ್ದು ಇದೇ ಸಿದ್ದರಾಮಯ್ಯ ಸರಕಾರ. ಇಂದೂ ಕೂಡ ಹಿಂದೂ ವಿರೋಧಿ ಹೇಳಿಕೆಗಳಿಂದ ರಾಜ್ಯದಲ್ಲಿ ಸಂಘರ್ಷಕ್ಕೆ ನಾಂದಿ ಹಾಡಿದ್ದಾರೆ ಎಂದು ಆರೋಪಿಸಿದರು.
ಮೊಟ್ಟೆ ಒಡೆದವನು‌ ನಮ್ಮ‌ ಪಕ್ಷದವನಲ್ಲ. ನಮ್ಮ‌ ಪಕ್ಷದವನಾಗಿದ್ದರೂ ಕೂಡ ಅಂತಹ‌ ಕೃತ್ಯ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ .‌ ವಿನಾಕಾರಣ ಈ ಪ್ರಕರಣದಲ್ಲಿ ಬಿಜೆಪಿ‌ ಪಕ್ಷವನ್ನು ಎಳೆದು ತರಲಾಗಿದೆ ಎಂದರು.‌ ಕೊಡಗು ಶಾಸಕರ ವಿರುದ್ದ ತೊಡೆತಟ್ಟಿರುವ ಸಿದ್ದರಾಮಯ್ಯ ತಾಕತ್ತಿದ್ದರೆ ಕೊಡಗಿನಲ್ಲಿ ಬಂದು ಸ್ಪರ್ಧಿಸಿ ಜಯಗಳಿಸಿ ತೋರಿಸಲಿ ಎಂದು ಸವಾಲು ಹಾಕಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!