ಕುಶಾಲನಗರ, ಡಿ 26: ಕುಶಾಲನಗರದಲ್ಲಿ ಶ್ರೀ ಶ್ರೀ ಶ್ರೀ ಡಾ.ಶಿವಕುಮಾರ್ ಮಹಾಸ್ವಾಮೀಜಿ ಅವರ ಮಂಟಪ ಮತ್ತು ನಾಮಫಲಕ ಉದ್ಘಾಟನೆ ಕಾರ್ಯಕ್ರಮ ಬಲಮುರಿ ಗಣಪತಿ ದೇವಾಲಯ ಬಳಿ ನಡೆಯಿತು.
ಕುಶಾಲನಗರದ ಶಿವರಾಮಕಾರಂತ್ ಬಡಾವಣೆಯಲ್ಲಿ ರೂ 3 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮಂಟಪವನ್ನು ಶಾಸಕ ಡಾ.ಮಂತರ್ ಗೌಡ ಅವರು ಲೋಕಾರ್ಪಣೆಗೊಳಿಸಿದರು. ಮಾಜಿ ಶಾಸಕ ಅಪ್ಪಚ್ಚುರಂಜನ್ ನಾಮಫಲಕ ಉದ್ಘಾಟಿಸಿದರು. ವಿವಿಧ ಮಠಗಳ ಮಠಾಧೀಶರುಗಳು ದಿವ್ಯ ಸಾನಿಧ್ಯ ವಹಿಸಿದ್ದರು.
ಪುರಸಭೆ ಮಾಜಿ ಜನಪ್ರತಿನಿಧಿಗಳಾದ ಜೈವರ್ಧನ್, ಸುರಯ್ಯಭಾನು ಸೇರಿದಂತೆ ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
Back to top button
error: Content is protected !!