ಕುಶಾಲನಗರ, ಡಿ 20: ಕುಶಾಲನಗರ ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲುಗುಂದ (ಹಾರಂಗಿ) ಹಿರಿಯ ಪ್ರಾಥಮಿಕ ಶಾಲೆಗೆ ಪಂಚಾಯಿತಿ ಅಧ್ಯಕ್ಷರಾದ ಭಾಸ್ಕರ್ ನಾಯಕ್ ಮತ್ತು ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಪರಮೇಶ್ವರ್
ಭೇಟಿ ನೀಡಿ ಪರಿಶೀಲನೆ ಮಾಡಿದರು ಈ ಕುರಿತು ಮಾತನಾಡಿದ ಅಧ್ಯಕ್ಷರಾದ ಭಾಸ್ಕರ್ ನಾಯಕ್ ರವರು 1963ನೇ ವರ್ಷದಲ್ಲಿ ಕಾವೇರಿ ನೀರಾವರಿ ಇಲಾಖೆಯ ಮುಖಾಂತರ
ಶಾಲೆ ನಿರ್ಮಾಣವಾಗಿದ್ದು ಪ್ರಸಕ್ತ ಸಾಲಿನಲ್ಲಿ ಸುಮಾರು 65 ಮಕ್ಕಳು ವ್ಯಾಸಂಗ ಮಾಡುತ್ತಿದ್ದು ಬಹುತೇಕ ಮಕ್ಕಳು ಕೂಲಿಕಾರ್ಮಿಕರ ಮಕ್ಕಳಾಗಿರುತ್ತಾರೆ ಶಾಲೆ ನಿರ್ಮಾಣವಾದ ನಂತರ
ಶಾಲಾ ಕೊಠಡಿಗಳು ಯಾವುದೇ ದುರಸ್ತಿ ಕಾರ್ಯವಾಗದೆ ಕೊಠಡಿಗಳ ಮೇಲ್ಚಾವಣಿ ಮಳೆ ಸಂದರ್ಭ ಸೋರುತಿದ್ದು ಗ್ರಾಮ ಪಂಚಾಯಿತಿ ಅನುದಾನ ಹಾಗೂ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಎರಡು ಕೊಠಡಿಗಳನ್ನು ಮಾತ್ರ ದುರಸ್ತಿ ಕಾರ್ಯವಾಗಿದ್ದು ಉಳಿದ ಕೊಠಡಿಗಳು ಅಭಿವೃದ್ಧಿಯಾದರೆ ಶಾಲಾ ಮಕ್ಕಳಿಗೆ ತೀರ ತೊಂದರೆ ಉಂಟಾಗಿದ್ದು ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಶಾಲಾ ಕೊಟ್ಟಡಿಗಳನ್ನು ಅಭಿವೃದ್ಧಿ ಮಾಡುವಂತೆ ತಿಳಿಸಲಾಗಿದೆ ಹಾಗೆಯೇ ಈ ಸಮಸ್ಯೆಯ ಕುರಿತು ತಾಲೂಕು ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಇವರಿಗೆ ತಿಳಿಸಿ ಪರಿಶೀಲನೆ ಮಾಡಿ ಅಭಿವೃದ್ಧಿ ಮಾಡಿಕೊಡುವಂತೆ ಮನವಿ ಮಾಡಲಾಗಿದ್ದು ಅದರಂತೆ ಇಂದು ಪರಿಶೀಲನೆಗಾಗಿ ಆಗಮಿಸಿರುವುದಾಗಿ ತಿಳಿಸಿದರು ನಂತರ ಮಾತನಾಡಿದ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಪರಮೇಶ್ವರ್ ರವರು ಮಾತನಾಡಿ ಶಾಲೆಯು ತುಂಬಾ ಹಳೆಯ ಶಾಲೆಯಾಗಿದ್ದು ಕೊಟ್ಟಡಿ ಅಭಿವೃದ್ಧಿ ಅವಶ್ಯಕತೆ ಇದೆ ಮಕ್ಕಳ ಸಂಖ್ಯೆ ಕೂಡ ಹೆಚ್ಚು ಇದ್ದು ಅಭಿವೃದ್ಧಿಗೆ ಬೇಕಾದಂತ ಕ್ರಮಗಳನ್ನು ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಕೈಗೊಳ್ಳುವುದಾಗಿ ಭರವಸೆ ನೀಡಿದರು ಈ ಸಂದರ್ಭ ಶಾಲೆಯ ಮುಖ್ಯ ಶಿಕ್ಷಕರಾದ ರಾಜಣ್ಣ ರವರು ಮತ್ತು ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ಹರೀಶ್ ಗ್ರಾಮಸ್ಥರಾದ ಚೌಡಪ್ಪ, ರಾಹುಲ್ ಉಪಸ್ಥಿತರಿದ್ದರು
Back to top button
error: Content is protected !!