ಕುಶಾಲನಗರ, ಡಿ 17: ಪರಿಶಿಷ್ಟ ಪಂಗಡದ ಮೂಲನಿವಾಸಿ ಸಮುದಾಯಗಳಾದ ಜೇನುಕುರುಬ ಸಮುದಾಯದವರ ಅಭಿವೃದ್ಧಿ ಕಾರ್ಯಕ್ರಮಗಳ ಸ್ವ ಉದ್ಯೋಗ ಕಾರ್ಯಕ್ರಮದಡಿ ರಾಫ್ಟಿಂಗ್ ಬೋಟ್ ಮತ್ತು ಸಲಕರಣೆಗಳ ಖರೀದಿಗೆ ತಲಾ 2 ಲಕ್ಷ ರೂಗಳಂತೆ ಒಟ್ಟು 9 ಮಂದಿಗೆ ಸಹಾಯಧನ ಬಿಡುಗಡೆಯಾಗಿತ್ತು. ಫಲಾನುಭವಿಗಳಾದ ಸುನಿಲ್ ಕುಮಾರ್ ಜೆ ಆರ್, ರಾಜೇಶ್ ಆರ್ ಸಿ, ರಂಜನ್ ಜೆ ಸಿ, ರಮೇಶ್ ಜೆ ಎಮ್, ನವೀನ್ ಕುಮಾರ್ ಜೆ ಕೆ, ರವಿ ಜೆ ಎಮ್, ಸತೀಶ್ ಜೆ ಸಿ, ಸತೀಶ್ ಜೆ ಎಮ್, ಮಂಜುನಾಥ್ ಜೆ ಆರ್ ಅವರುಗಳು ರಾಫ್ಟ್ ಬೋಟ್ ಗಳನ್ನು ಖರೀದಿಸಿದ್ದು ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರು ಫಲಾನುಭವಿಗಳಿಗೆ ಪರವಾನಗಿ ಹಸ್ತಾಂತರಿಸಿದರು. ದುಬಾರೆ ಗೆ ಸ್ವತಃ ಭೇಟಿ ನೀಡಿ ಫಲಾನುಭವಿಗಳ ಹೊಸ ಉದ್ಯಮಕ್ಕೆ ಚಾಲನೆ ನೀಡಿದರು. 2021-22 ನೇ ಸಾಲಿನಲ್ಲಿ ಅಂದಿನ ಶಾಸಕ ಅಪ್ಪಚ್ಚುರಂಜನ್ ಅವರ ಅವಧಿಯಲ್ಲಿ ಅನುದಾನ ಬಿಡುಗಡೆಯಾಗಿತ್ತು, ಹಾಲಿ ಸಂಸದರ ಯದುವೀರ್ ಅವರ ಪ್ರಯತ್ನದಿಂದ ಪರವಾನಗಿ ವಿತರಣೆ ನಡಿದಿದೆ ಎಂದು ಗಿರಿಜನ ಮುಖಂಡ ದಿಶಾ ಸಮಿತಿ ಸದಸ್ಯ ಆರ್.ಕೆ.ಚಂದ್ರ ತಿಳಿಸಿದ್ದಾರೆ.
Back to top button
error: Content is protected !!