ಕ್ರೀಡೆ

ರಾಷ್ಟ್ರದ ಮಟ್ಟದ ಕ್ರೀಡಾಕೂಟ: ಚಿನ್ನದ ಪದಕ ಗೆದ್ದ ಶಿಶಿರಾ.

ಕೂಡಿಗೆ, ಡಿ. ,14: ರಾಜಸ್ಥಾನದ ಜೈಪುರ್ ದಲ್ಲಿ ನಡೆದ ಹೆಚ್. ಸಿ. ಜಿ. ನ್ಯಾಷನಲ್ ಲೆವಲ್ ಸ್ಪೋರ್ಟ್ಸ್ ಮೀಟ್‌ನ 200 ಮೀಟರ್ ಓಟದಲ್ಲಿ ಚಿನ್ನದ ಪದಕ, ಹಾಗೂ 100. ಮೀಟರ್ ಓಟದ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಗಳಿಸಿರುತ್ತಾರೆ.
ಶಿಶಿರಾ ರವರು ಮೈಸೂರಿನ ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಡಯಟಿಸಿಯನ್ ಅಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬೆಂಗಳೂರಿನಲ್ಲಿ ಪ್ರಥಮವಾಗಿ ಭಾಗವಹಿಸಿ ಪ್ರಥಮ ಸ್ಧಾನ ಪಡೆದು ನಂತರ ರಾಜಸ್ಥಾನದ ಜೈಪುರದಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಷ್ಟ್ರದ ಮಟ್ಟದಲ್ಲಿ ಪ್ರಥಮ ಸ್ಧಾನ ಗಳಿಸಿರುತ್ತಾರೆ.
ಇವರು ಕುಶಾಲನಗರ ತಾಲ್ಲೂಕು ನಂಜರಾಯಪಟ್ಟಣ ಗ್ರಾಮದ ರೇಣುಕಾ ಮತ್ತು ಪ್ರೇಮಾನಂದ ರವರ ಪುತ್ರಿ ಯಾಗಿರುತ್ತಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!