ಸಾಂಸ್ಕೃತಿಕ

ಕುಶಾಲನಗರ ಅದ್ದೂರಿ ಕನ್ನಡ ರಾಜ್ಯೋತ್ಸವದಲ್ಲಿ ಪ್ರೇಕ್ಷಕರ ಗಮನಸೆಳೆದ ಕೂಡಿಗೆಯ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳ ನೃತ್ಯ

ಕುಶಾಲನಗರ, ನ 30: ದಿನಾಂಕ: 29-11-2025 ರ ಶನಿವಾರ ಕುಶಾಲನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಸಂಭ್ರಮದ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ನೃತ್ಯ ಸಂಯೋಜಕ ಅಕ್ತರ್ ರವರ ನೇತೃತ್ವದ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳಿಂದ ಸತತ 3 ಗಂಟೆಯ ಕಾಲ ಅದ್ದೂರಿ ನೃತ್ಯ ಪ್ರದರ್ಶನ ನೆರವೇರಿತು. ಕರ್ನಾಟಕ ರಾಜ್ಯದ ವಿವಿಧ ರೀತಿಯ ವಿಭಿನ್ನ ಶೈಲಿಯ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸುವ ಮೂಲಕ ಎ ಕ್ರಿಯೇಟಿವ್ ನೃತ್ಯ ಪಟುಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಕಾರ್ಯಕ್ರಮದಲ್ಲಿ ವಿಶೇಷ ಕೌಶಲ್ಯದ ಮೂಲಕ ನಿರೂಪಣೆ ಹಾಗೂ ಕನ್ನಡ ನಾಡು-ನುಡಿಯ ಸಂಗೀತದೊಂದಿಗೆ ಮೈಸೂರಿನಿ ಪ್ರಖ್ಯಾತ ಶ್ರೀ ಶಶಿಕುಮಾರ್ ರವರು ಕಾರ್ಯಕ್ರಮವನ್ನು ನೆರವೇರಿಸಿದರು. ಹಲವಾರು ಆಕರ್ಷಣೀಯ ಪಾಶ್ಚಾತ್ಯ ನೃತ್ಯಗಳು ಹಾಗೂ ಶಾಸ್ತ್ರೀಯ ನೃತ್ಯಗಳು ನೆರೆದಿದ್ದ ಪ್ರೇಕ್ಷಕರ ಮೈ ರೋಮಾಂಚನಗೊಳಿಸುವ ಮೂಲಕ ಗಮನಸೆಳೆಯಿತು. ಇದೇ ಸಂದರ್ಭ ಕುಶಾಲನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘ (ರಿ) ಅಧ್ಯಕ್ಷರು ಕಾರ್ಯದರ್ಶಿಯವರು ಹಾಗೂ ಸರ್ವ ಪದಾಧಿಕಾರಿಗಳು ಮತ್ತು ಆಟೋ ಚಾಲಕರು ಸೇರಿ “ಡ್ಯಾನ್ಸ್ ಡ್ಯಾನ್ಸ್” ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ಮಾಡಿದಂತಹ ನೃತ್ಯ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಪದಕ ಮತ್ತು ಬಹುಮಾನವನ್ನು ನೀಡುವ ಮೂಲಕ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು. ಈ ಕಾರ್ಯಕ್ರಮಕ್ಕೆ ಹಲವಾರು ಸಾರ್ವಜನಿಕರು, ಆಟೋ ಚಾಲಕರು ಮತ್ತು ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿಯ ಪೋಷಕರು ತಮ್ಮ ಕೆಲಸ ಕಾರ್ಯಗಳನ್ನು ಬಿಡುವು ಮಾಡಿಕೊಂಡು ಕಾರ್ಯಕ್ರಮವನ್ನು ಕೊನೆಯ ವರೆಗೂ ವೀಕ್ಷಿಸಿ ಚಪ್ಪಾಳೆಯ ಮೂಲಕ ನೃತ್ಯ ಪಟುಗಳಿಗೆ ಪ್ರೋತ್ಸಾಹಿಸಿ ಕುಣಿದು ಕುಪ್ಪಳಿಸಿದರು. ಸಂದರ್ಭ ವಿಶೇಷ ಆಕರ್ಷಣೆಯ ನೃತ್ಯ ಗೊಂಬೆಗಳು ಜನರ ಗಮನಸೆಳೆಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!