ಸಭೆ

ಹನುಮ ಜಯಂತಿ ದಿನ ಹೋಟೆಲ್ ಓಪನ್ ಇಡಲು ಸಲಹೆ.

ಕುಶಾಲನಗರ ನ 25: ಕುಶಾಲನಗರದಲ್ಲಿ ಡಿಸೆಂಬರ್ 2 ನೇ ತಾರೀಖು ಅದ್ದೂರಿ ಹನುಮ ಜಯಂತಿ ಜರುಗಲಿದೆ. ಅಂದು ಕುಶಾಲನಗರ ಪುರಸಭೆ ವ್ಯಾಪ್ತಿಯ ಎಲ್ಲ ಹೋಟೆಲ್ ಗಳನ್ನು ಓಪನ್ ಮಾಡಿಕೊಂಡು ವ್ಯಾಪಾರ ಮಾಡಲು ಪುರಸಭೆ ವತಿಯಿಂದ ಅನುಮತಿ ನೀಡಲಾಗಿದೆ ಎಂದು ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಗಿರೀಶ್ ತಿಳಿಸಿದರು.

ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್, ಹೋಟೆಲ್ ಮಾಲೀಕರೊಂದಿಗೆ ಕನ್ನಿಕಾ ಸಭಾಂಗಣದಲ್ಲಿ ಸಭೆ ನಡೆಸಲಾಯಿತ್ತು. ಅಧಿಕೃತವಾಗಿ ಡಿಸೆಂಬರ್ 2 ನೇ ತಾರೀಖು ಒಂದು ದಿನದ ಮಟ್ಟಿಗೆ ಎಲ್ಲ ಹೋಟೆಲ್ ಗಳನ್ನು ತೆಗೆದು ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹೋಟೆಲ್ ಇಲ್ಲದವರು ಯಾರಾದರೂ ವ್ಯಾಪಾರ ಮಾಡಲು ಬಯಸಿದರೆ ಅಂತವರಿಗೆ ಪುರಸಭೆಯ ವಾಣಿಜ್ಯ ಕಟ್ಟಡದ ಮುಂಭಾಗದಲ್ಲಿ ಅವಕಾಶ ನೀಡುತ್ತೇವೆ ಎಂದು ತಿಳಿಸಿದರು. ಇಲ್ಲಿ ವ್ಯಾಪಾರ ಮಾಡುವವರು ಶನಿವಾರದೊಳಗೆ ಪುರಸಭೆಗೆ ಅರ್ಜಿ ಸಲ್ಲಿಸಲು ಹೇಳಿದ್ದಾರೆ.
ಚೇಂಬರ್ ಅಧ್ಯಕ್ಷ ಕೆ ಎಸ್ ನಾಗೇಶ್ ಮಾತನಾಡಿ, ಇದು ಅಧಿಕೃತ ಸಭೆಯಾಗಿರುವುದರಿಂದ ಹೋಟೆಲ್ ಮಾಲೀಕರು ಯಾವುದೇ ಆತಂಕಕ್ಕೆ ಒಳಗಾಗದೇ ದೈರ್ಯವಾಗಿ ವ್ಯಾಪಾರ ಮಾಡಲು ಸಲಹೆ ನೀಡಿದರು. ಒಟ್ಟಿನಲ್ಲಿ ಹನುಮ ಜಯಂತಿ ಆಚರಣೆ ಯಶಸ್ವಿಯಾಗುವ ಗುರಿಯೊಂದಿಗೆ ಕೆಲಸ ಮಾಡೋಣ ಎಂದರು.
ಬಿ.ಆರ್.ನಾಗೇಂದ್ರ ಪ್ರಸಾದ್ ಮಾತನಾಡಿ, ಹೋಟೆಲ್ ನಲ್ಲಿ ಅವತ್ತು ಅನಾವಶ್ಯಕ ದರ ಹೆಚ್ಚಳ ಮಾಡದೇ, ಮಾಮೂಲಿ ರೇಟ್ ನಲ್ಲೇ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಆಹಾರ ಒದಗಿಸಲು ಕಿವಿಮಾತು ಹೇಳಿದರು.
ಸಭೆಯಲ್ಲಿ ಹೋಟೆಲ್ ಮಾಲೀಕರು ಮಾತನಾಡಿ, ನಾವು ಹನುಮ ಜಯಂತಿ ದಿನ ರಾತ್ರಿ ವ್ಯಾಪಾರ ಮಾಡಬಹುದು, ಆದರೆ ನಮಗೆ ಬಂದೋಬಸ್ತ್ ನೀಡುವುದು ಯಾರು ಎಂದು ಪ್ರಶ್ನಿಸಿದರು. ಮುಖ್ಯಾಧಿಕಾರಿ ಗಿರೀಶ್ ಮಾತನಾಡಿ, ಪುರಸಭೆ ಮತ್ತು ಚೇಂಬರ್ ಆಫ್ ಕಾಮರ್ಸ್ ನಿಂದ ಪೊಲೀಸ್ ಇಲಾಖೆಗೆ ಅಧಿಕೃತವಾಗಿ ಮನವಿ ಮಾಡಿಕೊಳ್ಳುತ್ತೇವೆ. ಶಾಸಕರಿಗೂ ಇವತ್ತಿನ ಸಭೆಯ ಮಾಹಿತಿ ನೀಡಿ, ಅವರಿಂದಲೂ ಸೂಚನೆ ಕೊಡಿಸುತ್ತೇವೆ ಎಂದು ಧೈರ್ಯ ಹೇಳಿದರು.
ಪುರಸಭೆಯ ಆರೋಗ್ಯಾಧಿಕಾರಿ ಉದಯ್, ಚೇಂಬರ್ ನ ಕಾರ್ಯದರ್ಶಿ ಚಿತ್ರ ರಮೇಶ್, ದಶಮಂಟಪ ಸಮಿತಿಯ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ ಇತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!