ಕೂಡಿಗೆ, ನ. 1: ಕೂಡಿಗೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.
ಕನ್ನಡ ಉಪನ್ಯಾಸಕ ರವೀಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡತ್ತಾ ಕನ್ನಡ ನಾಡು ನುಡಿಯ ಬಗ್ಗೆ ಉಪನ್ಯಾಸ ನೀಡಿದರು.
ದೇಶದಲ್ಲಿ ಒಟ್ಟು ಐದು ಬೂಕರ್ ಪ್ರಶಸ್ತಿಗಳು ಲಭಿಸಿದೆ ಅದರಲ್ಲಿ ಕನ್ನಡ ಕೃತಿಗೆ ಈ ಪ್ರಶಸ್ತಿ ಬಂದಿರುವುದು ಸಂತಸದ ವಿಷಯ ಎಂದು ತಿಳಿಸಿದರು. ಮಹಾ ಕವಿಗಳಾದ ಪಂಪ, ರನ್ನ, ರಾಘವಾಂಕ, ಮೊದಲಾದವರ ಸಾಹಿತ್ಯದ ಕೃಷಿಯನ್ನು ಕೊಂಡಾಡಿದರು ಕನ್ನಡ ಭಾಷೆ ಉಳಿಯಬೇಕಾದರೆ ಕನ್ನಡ ನಾಡಿನಲ್ಲಿರುವ ಎಲ್ಲರೂ ಅದನ್ನು ಬಳಸುವಂತಾಗಬೇಕು, ಎಂದರು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹಂಡ್ರಂಗಿ ನಾಗರಾಜ್ ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯ ಶಾಸನಗಳು ಉತ್ತರ ಭಾರತದಲ್ಲಿ ಸಿಗುತ್ತಿರುವುದು ಕನ್ನಡ ಭಾಷೆಯ ವಿಸ್ತಾರತೆಯನ್ನು ತಿಳಿಸುತ್ತದೆ. ನಮ್ಮ ನೆಲ ನಮ್ಮ ಜಲ ನಮ್ಮ ಭಾಷೆ ಯಾವತ್ತೂ ದೇಶದಲ್ಲಿ ಶ್ರೇಷ್ಠತೆಯನ್ನು ಕಾಪಾಡಿಕೊಂಡು ಬಂದಿದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಕನ್ನಡ ಶಾಲೆಗಳು ಮುಚ್ಚುತ್ತಿರುವುದು ವಿಷಾದನೀಯ ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿದರು.
ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ನೀಡಲಾಯಿತು.
ವೇದಿಕೆಯಲ್ಲಿ ಹಿರಿಯ ಉಪನ್ಯಾಸಕರಾದ ನಾಗಪ್ಪ ಯಾಲಕ್ಕಿ ಕಟ್ಟೆ, ರಮೇಶ್, ಹನುಮರಾಜು,ಸೂಸಿ ತಂಗಚ್ಚನ್, ಲಿನೆಟ್ ಫರ್ನಾಂಡಿಸ್, ಪ್ರೇಕ್ಷಿತ, ಕಾವೇರಮ್ಮ ಗೌತಮಿ ಮೊದಲಾದವರಿದ್ದರು.
Back to top button
error: Content is protected !!