ಕುಶಾಲನಗರ, ಅ 29: 387ನೇ ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ ಮುಂದಿನ ಸಾಲಿನ ಚುನಾವಣೆ ಅ.31 ರಂದು ನಡೆಯಲಿದ್ದು ವಿವಿಧ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಂದ ಮತಯಾಚನೆ ಭರದಿಂದ ಸಾಗಿದೆ.
ಹೆಬ್ಬಾಲೆ ಬಿಸಿಎಂ ಎ ಕ್ಷೇತ್ರದಿಂದ ಹೆಚ್.ಟಿ.ದಿನೇಶ,
ಮಹಿಳಾ ಮೀಸಲು ಕ್ಷೇತ್ರದಿಂದ ಟಿ.ಎಲ್.ಗಂಗಮ್ಮ, ಸಾಮಾನ್ಯ ಕ್ಷೇತ್ರದಿಂದ ಕುಮಾರಸ್ವಾಮಿ ಮತ್ತು ಬೆಂಬಲಿಗರು ಕೂಡಿಗೆಯಲ್ಲಿ ಮತಯಾಚನೆಯಲ್ಲಿ ತೊಡಗಿದ್ದಾರೆ.
ಈ ಮೂವರು ಅಭ್ಯರ್ಥಿಗಳ ಹಣ್ಣಿನ ಬುಟ್ಟಿ ಚಿನ್ಹೆಗೆ ಸಹಕಾರ ಸಂಘದ ಹೆಬ್ಬಾಲೆ ಕ್ಷೇತ್ರ ವ್ಯಾಪ್ತಿಯ ತೊರೆನೂರು, ಹೆಬ್ಬಾಲೆ, ಕೂಡಿಗೆ, ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಉಪಗ್ರಾಮಗಳಲ್ಲಿರುವ 767 ಮತದಾರರ ಸದಸ್ಯರುಗಳು ತಮ್ಮ ಅತ್ಯಮೂಲ್ಯ ಮತ ನೀಡಿ ವಿಜಯಶಾಲಿಗಳಾಗಿಸಲು ಹೆಚ್.ಟಿ.ದಿನೇಶ್ ಅವರು ಕೋರಿದ್ದಾರೆ.
ಲ್ಯಾಂಪ್ಸ್ ಅಧ್ಯಕ್ಷ ಅರುಣ್ ರಾವ್, ಕೂಡಿಗೆ ಗ್ರಾಪಂ ಸದಸ್ಯ ಅನಂತ್, ತೊರೆನೂರು ಸಹಕಾರ ಸಂಘದ ನಿರ್ದೇಶಕ ಕೆ.ಎಸ್.ಕೃಷ್ಣೇಗೌಡ ಸೇರಿದಂತೆ ಸ್ಥಳೀಯರಾದ ರವಿಚಂದ್ರ, ಪ್ರದೀಪ್ ಕುಮಾರ್, ಚಿದಂಬರ, ಲೋಕೇಶ್, ಮಲ್ಲೇಶ್, ಅನಿಲ್ ಕುಮಾರ್, ಹರೀಶ್ ಹಾಲಪ್ಪ, ರಾಮಚಂದ್ರ ಮತ್ತಿತರರು ಮತಯಾಚನೆ ಸಂದರ್ಭ ಇದ್ದರು.
Back to top button
error: Content is protected !!