ಕುಶಾಲನಗರ, ಅ 28: ಕರ್ನಾಟಕ ರಕ್ಷಣಾ ವೇದಿಕೆಯ ಟಿ. ಎ. ನಾರಾಯಣ ಗೌಡ ಬಣದ ಕೊಡಗು ಜಿಲ್ಲೆಯ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಕೂಡಿಗೆಯ ಕೆ.ಪಿ.ರಾಜು ಅವರನ್ನು ಕನ್ನಡ ಸಿರಿ ಸ್ನೇಹ ಬಳಗದಿಂದ ಸನ್ಮಾನಿಸಿ ಗೌರವಿಸಲಾಯಿತು.
ಬಳಗದ ಅಧ್ಯಕ್ಷ ಬಿ.ಎಸ್ ಲೋಕೇಶ್ ಸಾಗರ ಮತ್ತು ತಂಡದವರು ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘದ ಕಛೇರಿಯಲ್ಲಿ ರಾಜು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಮಾತನಾಡಿದ ಬಿ. ಎಸ್.ಲೋಕೇಶ್ ಸಾಗರ್ ಅವರು, ಕನ್ನಡ ನಾಡು, ನೆಲ, ಜಲ, ಭಾಷೆ ಸಂರಕ್ಷಣೆಗೆ ಕನ್ನಡ ಪರ ಸಂಘಟನೆಗಳ ಅನಿವಾರ್ಯತೆ ಇದೆ. ಸಂಘಟನೆಯ ಮೂಲಕ ಜಿಲ್ಲೆಯಲ್ಲಿ ಕನ್ನಡ ಪರ ಚಟುವಟಿಕೆ ಮತ್ತು ಹೋರಾಟಗಳಲ್ಲಿ ತಮ್ಮ ತಂಡವನ್ನು ತೊಡಗಿಸಿಕೊಂಡು ಕನ್ನಡದ ಬೆಳವಣಿಗೆಗೆ ಕಾರ್ಯೋನ್ಮಖರಾಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ಮಾತನಾಡಿ, ನಾರಾಯಣಗೌಡ ಅವರು ರಾಜು ಅವರನ್ನು ಗುರುತಿಸಿ ಹೆಚ್ಚಿನ ಜವಬ್ದಾರಿ ನೀಡಿದ್ದಾರೆ. ನೂತನ ಅಧ್ಯಕ್ಷರು ತಮ್ಮ ಅಧಿಕಾರ ಅವಧಿಯಲ್ಲಿ ಉತ್ತಮ ಸಂಘಟನೆ ಮೂಲಕ ಕನ್ನಡಪರ ಹೋರಾಟ, ಕಾರ್ಯಕ್ರಮಗಳನ್ನು ರೂಪಿಸಿ ಸಮಾಜಕ್ಕೆ ಕೊಡುಗೆ ನೀಡುವಂತಾಗಲಿ ಎಂದರು.
ಈ ಸಂದರ್ಭ ಕನ್ನಡ ಸಿರಿ ಸ್ನೇಹ ಬಳಗದ ಪ್ರಮುಖರಾದ ಕೆ.ಕೆ. ನಾಗರಾಜಶೆಟ್ಟಿ, ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ್, ಕೂಡಿಗೆ ಹನುಮ ಸೇನಾ ಸೇವಾ ಸಮಿತಿ ಕಾರ್ಯದರ್ಶಿ ರವಿ, ಖಚಾಂಜಿ ಧರ್ಮ, ರೈತ ಸಂಘದ ಅಧ್ಯಕ್ಷ ಕೆ.ಸಿ. ರಾಮಣ್ಣ, ಸತ್ಯನಾರಾಯಣ ವೃತಾಚರಣಾ ಸಮಿತಿ ಅಧ್ಯಕ್ಷ ಗುರುಪ್ರಸಾದ್, ಉದ್ಯಮಿ ಹನುಮರಾಜ್, ಸಮಿತಿಯ ಸದಸ್ಯರಾದ ಅರುಣ್ ಮಾದಪ್ಪ, ಸಂತೋಷ್, ಮಂಜುನಾಥ್, ಕೂಡಿಗೆ ಡೇರಿ ನಿವೃತ್ತ ಅಧಿಕಾರಿ ವಿಶ್ವನಾಥ, ರಾಮು ಮತ್ತಿತರರು ಇದ್ದರು.
Back to top button
error: Content is protected !!