ಪ್ರತಿಭಟನೆ

ಪೂರ್ಣಗೊಳ್ಳದ ಅಂಬೇಡ್ಕರ್ ಭವನ‌ ಕಾಮಗಾರಿ: ಪಾಳು ಬಿದ್ದ ಕಟ್ಟಡ: ಅಧಿಕಾರಿಗಳ ವಿರುದ್ದ ಪ್ರತಿಭಟನೆ

ಕುಶಾಲನಗರ, ಅ 21:ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಸುಂದರ ನಗರದ ಪ್ರಥಮ ದರ್ಜೆ ಕಾಲೇಜು ಪಕ್ಕದಲ್ಲಿ ಇರುವ ಅಂಬೇಡ್ಕರ್ ಭವನದ ಕೆಲಸ 10 ವರ್ಷಗಳಿಂದ ಪೂರ್ಣ ಪೂರ್ಣಗೊಳ್ಳದ ಕಾರಣ ದಲಿತ ಸಂಘರ್ಷ ಸಮಿತಿಯಿಂದ ಸಮಾಜ ಕಲ್ಯಾಣ ಇಲಾಖೆ ವಿರುದ್ದ ಪ್ರತಿಭಟನೆ ನಡೆಯಿತು.

ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಕೆ.ಬಿ.ರಾಜು ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಇದುವರೆಗೆ ಕೆಲಸವನ್ನು ಮಾಡಿರುವುದಿಲ್ಲ ಅಂಬೇಡ್ಕರ್ ಭವನದ ಕೆಲಸವನ್ನು ಪೂರ್ಣ ಮಾಡಲಿ ಹಾಗೂ ಅಂಬೇಡ್ಕರ್ ಭವನದ ಕಿಟಕಿ ಎಲ್ಲ ಗಾಜುಗಳು ಹೊಡೆದು ಹೋಗಿದ್ದು ಸುತ್ತಲು ಗಿಡ ಗಂಟೆಗಳು ಬೆಳೆದು ಪುಂಡ ಪೋಕರಿಗಳಿಗೆ ಇಸ್ಪೀಟ್ ಆಟದ ಅಡ್ಡ ಆಗಿದೆ ಹಾಗೂ ಅಂಬೇಡ್ಕರ್ ಭವನ ಜಾಗವನ್ನು ಬೇರೆಯವರು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಅಂಬೇಡ್ಕರ್ ಭವನವನ್ನು ಕೂಡಲೇ ಕಾಮಗಾರಿಯನ್ನು ಮಾಡಿ ಸೃಷ್ಟಿಗೊಳಿಸಿ ಸುತ್ತಲೂ ತಡೆಗೋಡೆಯನ್ನು ನಿರ್ಮಿಸಿ ಉದ್ಘಾಟಿಸಿ ಕೊಡಬೇಕು. ತಪ್ಪಿದರೆ ಕುಶಾಲನಗರ ತಾಲ್ಲೂಕು ಕಚೇರಿಯ ಮುಂಭಾಗ ಹಾಗೂ ಮಡಿಕೇರಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಕೆ ಬಿ ರಾಜು ಎಚ್ಚರಿಸಿದ್ದಾರೆ.

ರಾಮ್ ಕುಮಾರ್ ಜಿಲ್ಲಾ ಅಧ್ಯಕ್ಷರು ಆರ್ ಪಿ ಐ ಕರ್ನಾಟಕ ಪಕ್ಷ

ಬಿ ಎಸ್ ರಮೇಶ್ ಜಿಲ್ಲಾ ಸಂಚಾಲಕರು ಕದಸಂಸ ಭೀಮವಾದ

ಎಸ್ ಕೆ ಸ್ವಾಮಿ ಜಿಲ್ಲಾ ಉಪಾಧ್ಯಕ್ಷರು ಕದಸಂಸ ಭೀಮವಾದ

ಟಿ ಜಿ ಶಿವಪ್ಪ ಜಿಲ್ಲಾ ಉಪಾಧ್ಯಕ್ಷರು ಆರ್‌ ಪಿ ಐ

ಸುಶಿಲ ತ್ಯಾಗರಾಜ್ ಜಿಲ್ಲಾ ಅಧ್ಯಕ್ಷರು ಆರ್ ಪಿ ಐ

ಕೆ ಜೆ ಸಾವಿತ್ರಮ್ಮ ಜಿಲ್ಲಾ ಅಧ್ಯಕ್ಷರು ಕದಸಂಸ ಭೀಮವಾದ

ಡಿ ಟಿ ಸುರೇಶ್ ಕುಮಾರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ

ಪ್ರೇಮ ಜಿಲ್ಲಾ ಉಪಾಧ್ಯಕ್ಷರು ಆರ್‌ ಪಿ ಐ

ಜೆ ಆರ್ ವೀಣಾ ಜಿಲ್ಲಾ ಉಪಾಧ್ಯಕ್ಷರು ಆರ್‌ ಪಿ ಐ

ಹದ್ದಯ್ಯ ದಲಿತ ಮುಖಂಡರು

ಬಿ ಆರ್ ರಾಜು ಜಿಲ್ಲಾ ಉಪಾಧ್ಯಕ್ಷರು

ವೆಂಕಟೇಶ್ ದಲಿತ ಮುಖಂಡರು

ಗೋವಿಂದರಾಜು ದಲಿತ ಮುಖಂಡರು

ವೆಂಕಟೇಶ್ ದಲಿತಮುಖಂಡರು

ತ್ರಿನೇಶ್ ದಲಿತ ಮುಖಂಡರು

ಚಂದ್ರ ದಲಿತ ಮುಖಂಡರು ಈ ಹೋರಾಟದಲ್ಲಿ ಭಾಗವಹಿಸಿದ್ದರು

Related Articles

Leave a Reply

Your email address will not be published. Required fields are marked *

Back to top button
error: Content is protected !!