ಕುಶಾಲನಗರ, ಸೆ. 7: ಕುಶಾಲನಗರ ಹಾರಂಗಿ ರಸ್ತೆಯ 10 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಯ ಶೇಕಡಾ 95.ರಷ್ಟು ಪೂರ್ಣಗೊಂಡಿದ್ದು ಅಣೆಕಟ್ಟೆಯ ಮುಂಭಾಗದ ಕಿರು ಸೇತುವೆಯ ಕಾಮಗಾರಿಯು ಇದೀಗ ಪೂರ್ಣಗೊಂಡು ಓಡಾಟಕ್ಕೆ ಮುಕ್ತಗೊಂಡಿದೆ.
ಕಳೆದ ವಾರ ಇದೇ ರಸ್ತೆಯಲ್ಲಿ ಪ್ರವಾಸಿ ಬಸ್ ಗುಂಡಿಗೆ ವಾಲಿದ ಹಿನ್ನೆಲೆಯಲ್ಲಿ ಸ್ಥಳೀಯ ನೀರಾವರಿ ಇಲಾಖೆಯ ಅಧಿಕಾರಿಗಳ ವಿರುದ್ದ ಪ್ರತಿಭಟನೆ ನಡೆದಿತ್ತು. ಇದೀಗ ಗುತ್ತಿಗೆದಾರ ಕಿರು ಸೇತುವೆಯ ಸಮೀಪದಲ್ಲಿ ಸಿಮೆಂಟ್ ಮಿಶ್ರಿತ ಕಾಂಕ್ರೀಟ್ ಹಾಕಿ ಸರಿಪಡಿಸಿ ವಾಹನಗಳ ಓಡಾಟಕ್ಕೆ ಅನುವುಮಾಡಿ ಕೊಟ್ಟಿದ್ದಾರೆ.
Back to top button
error: Content is protected !!