ಕುಶಾಲನಗರ, ಅ 07:
ದಿನಾಂಕ: 07-10-2025 ರ ಮಂಗಳವಾರ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘ ಕೊಡಗು ಜಿಲ್ಲೆ, ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭ ಕುಶಾಲನಗರದ ಮುಳ್ಳುಸೋಗೆ ವಾಲ್ಮೀಕಿ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವಿಶೇಷ ನೃತ್ಯ ವೈಭವ ಕಾರ್ಯಕ್ರಮದಲ್ಲಿ ನೃತ್ಯ ಸಂಯೋಜಕ ಅಕ್ತರ್ ನೇತೃತ್ವದ ಕೊಡಗಿನ ಕೂಡಿಗೆಯ ಹೆಸರಾಂತ ನೃತ್ಯ ಸಂಸ್ಥೆಯಾದ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ವಿದ್ಯಾರ್ಥಿಗಳು ಭಾರತದ ಹಾಗೂ ಕರ್ನಾಟಕದ ಹಲವು ಸಂಸ್ಕೃತಿಯನ್ನು ಒಳಗೊಂಡ ವಿಶೇಷ ನೃತ್ಯ ಪ್ರದರ್ಶನ ನೀಡುವ ಮೂಲಕ ನೆರೆದಿದ್ದ ಜನರ ಮನಗೆದ್ದರು. ಉತ್ತಮ ಆಕರ್ಷಣೀಯ ನೃತ್ಯ ಪ್ರಕಾರಗಳನ್ನು ನೆರವೇರಿಸಿ ಕೊಟ್ಟಂತಹ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ನೃತ್ಯ ಸಂಸ್ಥೆಯ ನೃತ್ಯ ಸಂಯೋಜ ಮತ್ತು ಸಂಸ್ಥಾಪಕ ಅಕ್ತರ್ ರವರಿಗೆ ಸಂಘದ ವತಿಯಿಂದ ಗಣ್ಯರಿಂದ ಸನ್ಮಾನಿಸಿ ಗೌರವಿಸಲಾಯಿತು. ನಂತರ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿ ಜನರ ಮನಗೆದ್ದ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಗಣ್ಯರಿಂದ ಮತ್ತು ಮುಖ್ಯ ಅಥಿತಿಗಳಿಂದ ಪ್ರಶಸ್ತಿ ಪತ್ರ ಮತ್ತು ಬಹುಮಾನವನ್ನು ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭ ಕುಶಾಲನಗರ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ವಿ.ಪಿ ಶಶಿಧರ್, ಕುಶಾಲನಗರ ತಾಲೂಕು ತಹಸೀಲ್ದಾರ್ ಕಿರಣ್ ಜಿ. ಗೌರಯ್ಯ, ಜಿಲ್ಲಾ ಮಹರ್ಷಿ ವಾಲ್ಮೀಕಿ ಸಂಘದ ಅಧ್ಯಕ್ಷ ಕೆ. ಎನ್ ಅಶೋಕ್, ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ, ಮುಖ್ಯಾಧಿಕಾರಿ ಗಿರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಸಂಘಟನೆಯ ಮುಖಂಡರಾದ ಕೆ. ಬಿ ರಾಜು, ಚಂದನ್ ಕುಮಾರ, ನಾಗೇಶ್ ಹಾಗೂ ಸಂಘದ ಜಿಲ್ಲಾ ಸಮಿತಿ ನಿರ್ದೇಶಕರು ಮತ್ತು ಸಾರ್ವಜನಿಕರು ಇದ್ದರು.
Back to top button
error: Content is protected !!