ಸುದ್ದಿಗೋಷ್ಠಿ
ಬಿಜೆಪಿಗರ ಪ್ರತಿಭಟನೆ ಪೂರ್ವಾಗ್ರಹ ಪೀಡಿತ: ಕಾಂಗ್ರೆಸ್ ಮುಖಂಡ ಅಬ್ದುಲ್ ರಜಾಕ್

ಕುಶಾಲನಗರ, ಅ 06:ರಸ್ತೆ ಗುಂಡಿ ಮುಚ್ಚುವ ವಿಷಯದಲ್ಲಿ ಬಿಜೆಪಿಗರ ಪ್ರತಿಭಟನೆ ಪೂರ್ವಾಗ್ರಹ ಪೀಡಿತ ಎಂದು ಕುಶಾಲನಗರ ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಅಬ್ದುಲ್ ರಜಾಕ್ ಹೇಳಿದರು.
ಅವರು ಕುಶಾಲನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿ, ಮಡಿಕೇರಿ ಕ್ಷೇತ್ರಕ್ಕೆ ಕೋಟ್ಯಂತರ ರೂಗಳ ಅನುದಾನ ತಂದು ಅಭಿವೃದ್ಧಿ ಪಡಿಸುತ್ತಿರುವ ಶಾಸಕರಾದ ಡಾ ಮಂತರ್ ಗೌಡ ಅವರ ಬಗ್ಗೆ ಹೇಳಿಕೆ ಖಂಡನೀಯ ಎಂದು ಅವರು ಹೇಳಿದರು .
ಮಾಜಿ ಶಾಸಕರಾದ ಅಪ್ಪಚ್ಚು ರಂಜನ್ ಅವರ ಅವಧಿಯಲ್ಲಿ ಅನುದಾನ ಬಳಸಿ ರಸ್ತೆ ನಿರ್ಮಾಣ ಕಾಮಗಾರಿ ನಡೆಸಿರುವುದು ಕಳಪೆ ಆಗಿರುವುದರಿಂದ ಗುಂಡಿ ಬಿದ್ದಿದೆ ಎಂದು ಆರೋಪಿಸಿದ ಅಬ್ದುಲ್ ರಜಾಕ್ ಮಡಿಕೇರಿ ಕ್ಷೇತ್ರದ ಅಭಿವೃದ್ಧಿಗೆ ಶಾಸಕರು 1800 ಕೋಟಿ ರೂ ಅನುದಾನ ತರವಲ್ಲಿ ಯಶಸ್ವಿಯಾಗಿದ್ದಾರೆ. ಬಹುತೇಕ ಕಾಮಗಾರಿಗಳಿಗೆ ಈಗಾಗಲೇ ಭೂಮಿ ಪೂಜೆ ನಡೆದಿದೆ. ಮಳೆ ಹಿನ್ನಲೆಯಲ್ಲಿ ಕಾಮಗಾರಿ ವಿಳಂಬವಾಗಿದೆ ಎಂದು ಹೇಳಿದರು.
ಬಿಜೆಪಿ ಯುವ ಮೋರ್ಚಾ ಪ್ರಮುಖ ಸುದ್ದಿಗೋಷ್ಠಿಯಲ್ಲಿ ಮೊಬೈಲ್ ನಲ್ಲಿ ಬಂದ ಫಾರ್ವರ್ಡ್ ಮೆಸೇಜ್ ಓದಿ ಹೇಳಿರುವುದು ಹಾಸ್ಯಾಸ್ಪದ ಎಂದರು. ಬಿಜೆಪಿಯ ರಾಜಕೀಯ ಸಂಚು ವಿರುದ್ಧ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಈಗಾಗಲೇ ಧ್ವನಿ ಎತ್ತಿದ್ದು ಶಾಸಕರ ಅಭಿವೃದ್ಧಿ ಮತ್ತು ಅನುದಾನದ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ದ ಎಂದರು.
ಪುರಸಭೆ ಸದಸ್ಯ ವಿ.ಎಸ್ ಆನಂದ್ ಕುಮಾರ್ ಮಾತನಾಡಿ ಕುಶಾಲನಗರ ಪುರಸಭೆಯ ಅವಧಿಯ 5 ವರ್ಷದಲ್ಲಿ ಮಾಜಿ ಶಾಸಕರಾದ ಅಪ್ಪಚ್ಚು ರಂಜನ್
ಪುರಸಭೆಗೆ ಯಾವುದೇ ವಿಶೇಷ ಅನುದಾನ ತಂದಿಲ್ಲ. ಐದು ವರ್ಷಗಳು ಕ್ಷೇತ್ರಕ್ಕೆ ಶೂನ್ಯ ಅನುದಾನ. ಶಾಸಕ ಮಂತರ್ ಗೌಡ ಎರಡುವರೆ ವರ್ಷ ಅವಧಿಯಲ್ಲಿ ಎರಡು ಬಾರಿ ವಿಶೇಷ ಅನುದಾನ ನೀಡಿದ್ದಾರೆ ಅಲ್ಪಸಂಖ್ಯಾತರ ನಿಧಿಯಲ್ಲಿ ಎರಡು ಕೋಟಿ. ವಿವಿಧ ಕಾಮಗಾರಿಗಳಿಗೆ ಒಟ್ಟು ನಾಲ್ಕು ಕೋಟಿ ಅನುದಾನ ನೀಡಿ ಮುಂದಿನ ದಿನಗಳಲ್ಲಿ ವಿಶೇಷ ಅನುದಾನ ನೀಡುವ ಭರವಸೆಯನ್ನು ಕೂಡ ನೀಡಿದ್ದಾರೆ.
ಪ್ರಜಾಪ್ರಭುತ್ವ ಮತ್ತು ನೈತಿಕತೆ ಬಗ್ಗೆ ಪ್ರಶ್ನೆ ಮಾಡಿದ ಬಿಜೆಪಿ ನಾಯಕರೇ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯರವರಿಗೆ ಮೊಟ್ಟೆ ಎಸೆದ ಪ್ರಕರಣ ಮತ್ತು ವಿನಯ್ ಸೋಮಯ್ಯರವರ ಆತ್ಮಹತ್ಯೆ ಬಗ್ಗೆ ಎರಡು ಶಾಸಕರಿಗೆ ಕೊಲೆಗಡುಕ ಎಂಬ ಪಟ್ಟ ನೀಡಿದ ಸಂದರ್ಭ ಬಿಜೆಪಿಗರಿಗೆ ಪ್ರಜಾಪ್ರಭುತ್ವದ ಬಗ್ಗೆ ಅರಿವು ಇರಬೇಕಿತ್ತು ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಮುಖಂಡ
ನಂಗಾರು ಜಗ ಮಾತನಾಡಿ,
ಮಳೆಗಾಲದಲ್ಲಿ ಕಾಮಗಾರಿ ನಡೆಸಲು ಸಾಧ್ಯವಿಲ್ಲ,
ಕೊಡಗು ಜಿಲ್ಲೆಗೆ ವಿಧಾನಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ , ಲೋಕಸಭಾ ಸದಸ್ಯರಾದ ಒಡೆಯರ್ ಕೊಡುಗೆ ಶೂನ್ಯ ಎಂದರೆ ತಪ್ಪಾಗಲಾರದು.
ನಮ್ಮ ನಾಯಕರ ತೇಜೋವಧೆ ಮಾಡುವುದೇ ಬಿಜೆಪಿಗರ ಕೆಲಸ ಎಂದು ಹೇಳಿದರು.
ಕುಶಾಲನಗರ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್ ಡಿ ಚಂದ್ರು ಮಾತನಾಡಿ ಮಾಜಿ ಶಾಸಕರಾದ ರಂಜನ್ ಅವರು ತಾಲೂಕಿನಲ್ಲಿ ಯಾವುದೇ ರೀತಿಯ ಸಮಸ್ಯೆಗೆ ಸ್ಪಂದನೆ ನೀಡುತ್ತಿರಲಿಲ್ಲ. ಅಂಬೇಡ್ಕರ್ ಭವನ ಸಮುದಾಯ ಭವನ ನಿರ್ಮಾಣ ಇದೀಗ ಶಾಸಕರಾದ ಮಂತರ್ ಗೌಡ ಅವರ ಸಾಧನೆಯಾಗಿದೆ. ಎರಡು ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು.
ಪುರಸಭೆಯ ನಾಮ ನಿರ್ದೇಶಕ ಸದಸ್ಯ ನವೀನ್ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಯುವ ಮುಖಂಡ ಚಂದನ್ ಕುಮಾರ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ ರಮೇಶ್ ಇದ್ದರು.



