ಕ್ರೀಡೆ

ಪೊನ್ನಂಪೇಟೆಯ ಹಾಕಿ ಟರ್ಫ್ ಮೈದಾನದಲ್ಲಿ ಹಾಕಿ ಕ್ರೀಡಾಕೂಟ

ಕಿಗ್ಗಟ್ ನಾಡ್ ಫ್ಲೈಯಿಂಗ್ ಎಲ್ಬೋ ಸಂಸ್ಥೆಯಿಂದ ಆಯೋಜನೆ

ಪೊನ್ನಂಪೇಟೆ, ಅ 05: ಕಿಗ್ಗಟ್ ನಾಡ್ ಫ್ಲೈಯಿಂಗ್ ಎಲ್ಬೋ ಸಂಸ್ಥೆಯವರು ಆಯೋಜಿಸಿದ, ಹಾಕಿ ಪಂದ್ಯಾವಳಿಯ ಮುಖ್ಯ ಅತಿಥಿಯಾಗಿ  ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗದ  ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಪೊನ್ನಣ್ಣರವರು ಭಾಗವಹಿಸಿದರು. ಪೊನ್ನಂಪೇಟೆಯ ಹಾಕಿ ಟರ್ಫ್ ಮೈದಾನದಲ್ಲಿ ಆಯೋಜನೆಗೊಂಡ ಹಾಕಿ ಕ್ರೀಡಾಕೂಟದಲ್ಲಿ ಕೊಡಗಿನ ವಿವಿಧ ಹಾಕಿ ತಂಡಗಳು ಭಾಗವಹಿಸಿದವು. ಮುಖ್ಯ ಅತಿಥಿಯಾಗಿ ಮಾತನಾಡುತ್ತಾ, ಭಾಗವಹಿಸಿದ ಎಲ್ಲಾ ತಂಡಗಳಿಗೆ ಶುಭ ಕೋರಿದ ಮಾನ್ಯ ಶಾಸಕರು, ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ, ಕೊಡಗಿನ ಹಾಕಿ ಪಟುಗಳು ರಾಜ್ಯ ಮಾತ್ರವಲ್ಲ ದೇಶಾದ್ಯಂತ ಖ್ಯಾತಿ ಪಡೆದು ವಿಶ್ವದೇಲ್ಲೆಡೆ ಮನೆ ಮಾತಾಗಿದ್ದಾರೆ. ಹಾಕಿ ಕ್ರೀಡೆಗೆ ಪ್ರಸಿದ್ಧವಾದ ಕೊಡಗಿನ ಪ್ರತಿಭೆಗಳು ಇಂತಹ ಕ್ರೀಡಾಕೂಟದಿಂದ ತಮ್ಮ ಆಟದ ಸಾಮರ್ಥ್ಯವನ್ನು ನಾಡಿಗೆ ಪರಿಚಯಿಸಿ ಪ್ರದರ್ಶಿಸುವಂತೆ ಆಗಲಿ ಎಂದು ಶುಭ ಹಾರೈಸಿದರು. ಜಾಣ್ಮೆ, ಚಾಕಚಕ್ಯತೆ ಹಾಗೂ ಚುರುಕುತನದ ಹಾಕಿ ಆಟವು ಕೊಡಗಿನ ಯುವ ಆಟಗಾರ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕ್ರೀಡೆಯನ್ನು ಎಲ್ಲರೂ ಕ್ರೀಡಾ ಮನೋಭಾವದಿಂದ ಸ್ವೀಕರಿಸಿ ಆಟವನ್ನು ಆಸ್ವಾದಿಸುವುದರೊಂದಿಗೆ ಸಮಾಜದಲ್ಲಿ ಬಾಂಧವ್ಯದ ಸಂದೇಶ ಸಾರುವಂಥ ಆಗಬೇಕೆಂದು ಕಿವಿಮಾತು ಹೇಳಿದರು. ತಾನು ಶಾಸಕನಾಗಿ ಆಯ್ಕೆಯಾದ ಬಳಿಕ ಕೊಡಗಿನ ಕ್ರೀಡಾ ಲೋಕಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿಕೊಂಡ ಮಾನ್ಯ ಶಾಸಕರು, ವಿ ಬಾಡಗದಲ್ಲಿ ವಿವಿಧ ಕ್ರೀಡಾ ವಸತಿ ನಿಲಯ ಕೇಂದ್ರಕ್ಕೆ ರಾಜ್ಯ ಸರ್ಕಾರದ ಯೋಜನೆ, ಕ್ಷೇತ್ರಾದ್ಯಂತ ಅನೇಕ ಭಾಗಗಳಲ್ಲಿ ಹೋಬಳಿ ಮಟ್ಟದ ಕ್ರೀಡಾಂಗಣಗಳಿಗೆ ನೀಡಿದ ಚಾಲನೆ ಹಾಗೂ ಅನುದಾನಗಳು ಹಾಗೂ ಕ್ರೀಡಾ ಸಂಬಂಧ ರಾಜ್ಯ ಸರ್ಕಾರ ಹಾಗೂ ಶಾಸಕರು ಕೈಗೊಂಡ ವಿವಿಧ ಕಾಮಗಾರಿಗಳ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಮಾನ್ಯ ಸಂಸದರು ಶ್ರೀ ಯದುವೀರ್ ಒಡೆಯರ್, ಎಂ ಎಸ್ ಬೆಳ್ಳಿಯಪ್ಪ, ವಿಜಯ್ ಉತ್ತಯ್ಯ, ಲವಕುಮಾರ್, ಪೂವಮ್ಮ, ಪಕ್ಷದ ಪ್ರಮುಖರು ಮುಕಳೇರ ಕುಶಾಲಪ್ಪ, ಟಾಟು ಮೊಣ್ಣಪ್ಪ, ಅಜ್ಜಿಕುಟ್ಟಿರ ಗಿರೀಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷರು ಅಣ್ಣೀರ ಹರೀಶ್, ದಿಲು, ಶಾಜಿ ಅಚ್ಚುತನ್, ರಮೇಶ್, ಬೋಪಣ್ಣ, ಪೂವಣ್ಣ, ಸಿದ್ದು ನಾಚಪ್ಪ, ಮನು, ನಿಖಿಲ್, ಕುಂಡಚ್ಚಿರ ಮಂಜು ದೇವಯ್ಯ, ರಫೀಕ್, ಮುತ್ತಣ್ಣ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರು ಜಮ್ಮಡ ಸೋಮಣ್ಣ, ಕ್ರೀಡಾ ಪ್ರೇಮಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!