ಕುಶಾಲನಗರ, ಸೆ 10: ಕುಶಾಲನಗರ ವಾರ್ಡ್ ವಿಂಗಡಣೆಯಲ್ಲಿ ಕೆಲವು ಲೋಪದೋಷಗಳಿವೆ. ಮುಳ್ಳುಸೋಗೆಯ ಚೌಡೇಶ್ವರಿ ಬಡಾವಣೆ ಎಂದು ಕೈಬಿಟ್ಟು ಚಾಮುಂಡೇಶ್ವರಿ ಬಡಾವಣೆ ಎಂದು ನಮೂದಿಸಿ ಅಲ್ಪಮಂದಿಯನ್ನು ಮಾತ್ರ ಸೇರಿಸಲಾಗಿದೆ. ಚೌಡೇಶ್ವರಿ ಬಡಾವಣೆಯ ಎಲ್ಲಾ ನಿವಾಸಿಗಳನ್ನು ಚೌಡೇಶ್ವರಿ ಬಡಾವಣೆಗೆ ಸೇರ್ಪಡೆ ಮಾಡಿ ಒಂದೇ ಮತಗಟ್ಟೆಯಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಲು ಆಗ್ರಹಿಸಿ ಮುಳ್ಳುಸೋಗೆ ಗ್ರಾಪಂ ಮಾಜಿ ಸದಸ್ಯ ಮಣಿ ನೇತೃತ್ವದಲ್ಲಿ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿ ಗೆ ಮನವಿ ಸಲ್ಲಿಸಿದರು.
Back to top button
error: Content is protected !!